ವಿದೇಶಗಳಿಂದ ನುಸುಳಿ ಬಂದ 50 ಸಾವಿರ ಮಂದಿ ರಾಜ್ಯದಲ್ಲಿ ನಕಲಿ ಆಧಾರ್ ಕಾರ್ಡ್ ಹೊಂದಿರುವುದಾಗಿ ಪತ್ತೆ

ಕಾಸರಗೋಡು: ವಿದೇಶದಿಂದ ಅಕ್ರಮವಾಗಿ ನುಸುಳಿ ಬಂದ ಸುಮಾರು 50,000ದಷ್ಟು ಮಂದಿ ನಕಲಿ ಆಧಾರ್ ಕಾರ್ಡ್ ಪಡೆದು ಕೇರಳದಲ್ಲಿ ಅಕ್ರಮ ವಾಗಿ ನೆಲೆಸಿರುವುದಾಗಿ ಕೇಂದ್ರ ಗುಪ್ತಚರ ವಿಭಾಗಗಳಿಗೆ ಸ್ಪಷ್ಟ ಮಾಹಿತಿ ಲಭಿಸಿದೆ.

?ಬಾಂಗ್ಲಾದೇಶ ಮ್ಯಾನ್ಮಾರ್, ಶ್ರೀಲಂಕಾ ಮತ್ತು ಪಾಕಿಸ್ಥಾನದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ ಬಂದವರಾಗಿದ್ದಾರೆ ಇವರು.  ಈ ರೀತಿ ಇವರು ನಕಲಿ ಆಧಾರ್ ಕಾರ್ಡ್ ಪಡೆದು ಕಾರ್ಮಿಕರ ಸೋಗಿನಲ್ಲಿ ರಾಜ್ಯದ ಎಲ್ಲಾ   ಜಿಲ್ಲೆಗಳಲ್ಲೂ ನೆಲೆಸಿರು ವುದಾಗಿಯೂ ಗುಪ್ತಚರ ವಿಭಾಗಕ್ಕೆ ಸ್ಪಷ್ಟ ಮಾಹಿತಿ ಲಭಿಸಿದೆ ಈ ಬಗ್ಗೆ ಆಂಟಿ ಟೆರರಿಸ್ಟ್ ಸ್ಕ್ವಾಡ್  ಕೂಡಾ ಇನ್ನೊಂ ದೆಡೆ   ಸಮಗ್ರ ತನಿಖೆ ಆರಂಭಿಸಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಎಂಬಂತೆ  ಎರ್ನಾಕುಳಂ  ಜಿಲ್ಲೆಯ ಪರುಂಬಾವೂರಿನಲ್ಲಿ  ವಲಸೆ ಕಾರ್ಮಿಕರು ನೆಲೆಸಿದ್ದಾರೆ. ಹೀಗೆ ವಿದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ ಬಂದಿರುವವರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪೆರುಂಬಾವೂರಿನಲ್ಲಿ ಕಾರ್ಮಿಕರ ಸೋಗಿನಲ್ಲಿ  ವಾಸಿಸುತ್ತಿದ್ದಾರೆ. ಇವರಿಗೆ ನಕಲಿ ಆಧಾರ್ ಕಾರ್ಡ್ ತಯಾರಿಸಿ ಕೊಡುವ ಹಲವು ಗುಪ್ತ ಕೇಂದ್ರಗಳು ಅಲ್ಲಿ ಕಾರ್ಯವೆಸಗುತ್ತಿವೆ.

ಅಸ್ಸಾಂ ಮತ್ತು ಪಶ್ಚಿಮ ಬಂಗಾಲದ ನಕಲಿ ಐಪಿ ವಿಳಾಸ ಬಳಸಿ ಇಂತಹವರಿಗೆ  ನಕಲಿ ಆಧಾರ್ ಕಾರ್ಡ್ ನಿರ್ಮಿಸಿಕೊಡಲಾಗುತ್ತಿದೆ. ಹೀಗೆ ಪಡೆಯಲಾಗುತ್ತಿರುವ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ಅವರು ನಕಲಿ ಮೊಬೈಲ್ ಸಿಮ್‌ಗಳನ್ನೂ ಪಡೆಯುತ್ತಿದ್ದಾರೆ.  ಪೆರುಂಬಾವೂರಿನ  ಭಾಯ್ ನಗರದಲ್ಲಿ  ಆಧಾರ್ ಕಾರ್ಡ್ ನಿರ್ಮಿಸಿಕೊಡುವ ಕೇಂದ್ರದಲ್ಲಿ ಸೈಬರ್ ದಾಳಿ ನಡೆಸಿ  ಆ ಮೂಲಕ ನಕಲಿ ಆಧಾರ್ ಕಾರ್ಡ್ ತಯಾರಿಸಲಾಗುತ್ತಿದೆ.  ಮಾತ್ರವಲ್ಲ ಇಂತಹ ಕೇಂದ್ರವೊಂದು ಮಲ ಪ್ಪುರದಲ್ಲೂ ಕಾರ್ಯ ವೆಸಗುತ್ತಿವೆಯೆಂ ದು ಗುಪ್ತಚರ ವಿಭಾಗಕ್ಕೆ ಸ್ಪಷ್ಟ ಮಾಹಿತಿ ಲಭಿಸಿದೆ.

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಇದೇ ರೀತಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಮತ್ತಿತರ ದೇಶಗಳಿಂದ ಲಕ್ಷಾಂತರ ಮಂದಿ ಅಕ್ರಮವಾಗಿ ನುಸುಳಿ ಬಂದು ಅಲ್ಲಿ ದಂಧೆ, ಗಲಭೆ ಇತ್ಯಾದಿಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಅದೇ ರೀತಿಯ ಬೆಳವಣಿಗೆಗಳು ಕೇರಳದಲ್ಲೂ ಉಂಟಾಗುವ ಸಾಧ್ಯತೆ ಮುಂದೆ ಅಲ್ಲಗಳೆಯುವಂತಿಲ್ಲವೆಂದೂ ಆದ್ದರಿಂದ ಆ ಬಗ್ಗೆ ಕೇರಳವೂ ಭಾರೀ  ಜಾಗ್ರತೆ ವಹಿಸಬೇಕೆಂದು ಕೇಂದ್ರ ಗುಪ್ತಚರ ವಿಭಾಗ ಕೇರಳ ಪೊಲೀಸರಿಗೆ ಇನ್ನೊಂದೆಡೆ ನಿರ್ದೇಶ ನೀಡಿದೆ.

Leave a Reply

Your email address will not be published. Required fields are marked *

You cannot copy content of this page