ವಿದ್ಯಾಗಿರಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಬೆಳ್ಳಿಯ ಛಾಯಾಚಿತ್ರ ಪ್ರತಿಷ್ಠೆ
ಬದಿಯಡ್ಕ: ವಿದ್ಯಾಗಿರಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠೆ ಇಂದು ಬೆಳಿಗ್ಗೆ ನಡೆಯಿತು. ನಿನ್ನೆ ಬೆಳಿಗ್ಗೆ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಿಂದ ಬದಿಯಡ್ಕ ಪೇಟೆಯಾಗಿ ವಿದ್ಯಾಗಿರಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮ ಜರಗಿತು. ಸಂಜೆ ವೇದಮೂರ್ತಿ ಗಣೇಶ್ ಭಟ್ ಮುಂಡೋಡು ಇವರ ಆಗಮನ, ವಿವಿಧ ಭಜನಾ ಸಂಘಗಳಿAದ ಭಜನೆ ನಡೆಯಿತು. ರಾತ್ರಿ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪ್ರಾಸಾದ ಶುದ್ಧಿ, ರಾಕ್ಷೆÆÃಘ್ನ ಹೋಮ, ಅಸ್ತçಕಲಶ ಪೂಜೆ, ವಾಸ್ತುಕಲಶ ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹ, ವಾಸ್ತು ಬಲಿ, ಸ್ಥಳ ಶುದ್ಧಿ, ಅನ್ನ ಸಂತರ್ಪಣೆ ನಡೆಯಿತು.