ವಿದ್ಯಾರ್ಥಿಗೆ ಬೀದಿನಾಯಿ ಕಡಿತ: ಆಸ್ಪತ್ರೆಗೆ
ಕಾಸರಗೋಡು: ಬೀದಿನಾಯಿ ಕಡಿತಕ್ಕೊಳಗಾಗಿ ಶಾಲಾ ವಿದ್ಯಾರ್ಥಿ ಗಾಯಗೊಂಡ ಘಟನೆ ನಗರದ ನೆಲ್ಲಿಕುಂಜೆ ಸಿಮ್ಕೋ ಬಳಿ ನಿನ್ನೆ ನಡೆದಿದೆ.
ನೆಲ್ಲಿಕುಂಜೆಯ ಮೊಹಮ್ಮದ್ ಶಾಫಿ ಎಂಬವರ ಮಗ ಚೆಮ್ನಾಡ್ ಹೈಯರ್ ಸೆಕೆಂಡರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಆಶ್ಫಾಕ್ (13) ಗಾಯಗೊಂಡ ವಿದ್ಯಾರ್ಥಿ. ಈತ ನಿನ್ನೆ ಸಂಜೆ ಶಾಲೆಯಿಂದ ವ್ಯಾನ್‌ನಲ್ಲಿ ಮನೆ ಬಳಿ ಬಂದಿಳಿದು ಮನೆಗೆ ನಡೆದುಕೊಂಡು ಹೋಗುವ ವೇಳೆ ಬೀದಿನಾಯಿ ಆತನ ಮೇಲೆರಗಿ ಕಚ್ಚಿ ಗಂಭೀರ ಗಾಯಗೊಳಿಸಿದೆ. ಬಾಲಕನನ್ನು ನಂತರ ಚೆಂಗಳ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.