ವಿದ್ಯಾರ್ಥಿನಿಯನ್ನು ಅಂಗಡಿಗೆ ಕರೆಸಿ ಚುಂಬನ: ವ್ಯಾಪಾರಿ ಸೆರೆ

ಹೊಸದುರ್ಗ: ಒಂಭತ್ತನೇ ತರಗತಿ ವಿದ್ಯಾರ್ಥಿನಿಯನ್ನು ಅಂಗಡಿಗೆ ಕರೆದು ಬಿಗಿದಪ್ಪಿ ಚುಂಬಿಸಿದ ಆರೋಪದಂತೆ ವ್ಯಾಪಾರಿಯನ್ನು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಜಿತಿನ್‌ಚಂದ್ರನ್ ಯಾನೆ ಉಣ್ಣಿ (29) ಎಂಬಾತನನ್ನು ಚಿಟ್ಟಾರಿಕಲ್ ಪೊಲೀಸರು ಬಂಧಿಸಿದ್ದಾರೆ. ವ್ಯಾಪಾರಿ ಕೈಯಿಂದ ಬಿಡಿಸಿಕೊಂಡು ಪಾರಾದ ವಿದ್ಯಾರ್ಥಿನಿ ಮನೆಯವರಲ್ಲಿ ವಿಷಯ ತಿಳಿಸಿದ್ದಳು. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ವ್ಯಾಪಾರಿಯನ್ನು ಬಂಧಿ ಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿ ಸುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page