ವಿದ್ಯುತ್ ದರ ಏರಿಕೆ ಮುಂದೂಡಿಕೆ
ತಿರುವನಂತಪುರ: ವಿದ್ಯುತ್ ದರ ಏರಿಕೆಯನ್ನು ಸರಕಾರ ಮುಂದೂಡಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಜ್ಯಾರಿಯಲ್ಲಿರುವುದ ರಿಂದ ದರ ಏರಿಕೆ ಮುಂದೂಡಿದ್ದು, ಇದರಿಂದ ಪ್ರಸ್ತುತ ಜ್ಯಾರಿಯಲ್ಲಿರುವ ದರ ನವೆಂಬರ್ 30ರವರೆಗೆ ಮುಂದುವರಿಯಲಿದೆ. ಯೂನಿಟ್ಗೆ 10ರಿಂದ 30 ಪೈಸೆವರೆಗೆ ಹೆಚ್ಚಳ ಹಾಗೂ ಬೇಸಿಗೆ ಕಾಲದಲ್ಲಿ ಪ್ರತ್ಯೇಕ ಸಮ್ಮರ್ ತಾರೀಫ್ ಫಿಕ್ಸೆಡ್ ದರ ಹೆಚ್ಚಿಸುವಂತೆ ಕೆಎಸ್ಇಬಿ ಬೇಡಿಕೆ ಮುಂದಿಟ್ಟಿದೆ.