ವಿದ್ಯುತ್ ಪವರ್ ಕಟ್ ಅನಿವಾರ್ಯ- ವಿದ್ಯುನ್ಮಂಡಳಿ
ಕಾಸರಗೋಡು: ಬೇಸಿಗೆ ಕಾಲ ದಲ್ಲಿ ಈ ಅವಧಿಯಲ್ಲಿ ರಾಜ್ಯದಲ್ಲಿ ವಿದ್ಯುತ್ ಉಪಯೋಗದ ಗಣನೀಯ ಏರಿಕೆ ಉಂಟಾಗುತ್ತಿದ್ದು, ಅದರಿಂದಾಗಿ ಅದನ್ನು ನಿಯಂತ್ರಿಸಲು ವಿದ್ಯುತ್ ಲೋಡ್ ಶೆಡ್ಡಿಂಗ್ ಮತ್ತು ಪವರ್ ಕಟ್ ಹೇರುವಂತೆ ರಾಜ್ಯ ವಿದ್ಯುನ್ಮಂ ಡಳಿ ರಾಜ್ಯ ಸರಕಾರದೊಂದಿಗೆ ವಿದ್ಯುಕ್ತ ಬೇಡಿಕೆ ಮುಂದಿರಿಸಿದೆ. ಇದೇ ಸಂದರ್ಭದಲ್ಲಿ ರಾಜ್ಯದ ಹಲವೆಡೆಗಳಲ್ಲಿ ಹಗಲು ಮತ್ತು ರಾತ್ರಿ ವೇಳೆಗಳಲ್ಲಿ ಈಗ ಅಘೋಷಿತ ಲೋಡ್ ಶೆಡ್ಡಿಂಗ್ ಜ್ಯಾರಿಗೊಳಿಸ ಲಾಗಿದೆ. ಅಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಉಂಟಾಗುತ್ತಿರುವು ದರಿಂದಲೇ ರಾಜ್ಯದ ಹಲವೆಡೆಗಳಲ್ಲಿ ಈಗಾಗಲೇ ಅಘೋಷಿತ ಲೋಡ್ ಶೆಡ್ಡಿಂಗ್ ಹೇರಬೇಕಾದ ಸ್ಥಿತಿ ಉಂಟಾಗಿದೆ ಎಂದು ಇದಕ್ಕೆ ವಿದ್ಯುನ್ಮಂಡಳಿ ಕಾರಣ ನೀಡಿದೆ. ಅಮಿತ ವಿದ್ಯುತ್ ಲೋಡಿಂಗ್‌ನಿಂದಾಗಿ ರಾಜ್ಯದ ಹಲವೆಡೆಗಳಲ್ಲಾಗಿ 700 ಟ್ರಾನ್ಸ್ ಫಾರ್ಮರ್‌ಗಳು ಹಾಳಾಗಿವೆ. ಇದು ವಿದ್ಯುತ್ ಲೋಡಿಂಗ್‌ನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡತೊಡಗಿದೆ. ಆದ್ದರಿಂದಲೇ ಇದನ್ನೆಲ್ಲಾ ನಿಯಂತ್ರಿಸಲು ಸಾಧ್ಯವಾದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮತ್ತು ಪವರ್ ಕಟ್ ಹೇರಬೇಕಾದ ಅನಿವಾರ್ಯತೆ ಈಗ ಉಂಟಾಗಿದೆಯೆಂದು ಸರಕಾರಕ್ಕೆ ಸಲ್ಲಿಸಿದ ಬೇಡಿಕೆಯಲ್ಲಿ ವಿದ್ಯುನ್ಮಂಡಳಿ ಹೇಳಿದೆ.
ಇದನ್ನು ಪರಿಶೀಲಿಸಲು ನಾಳೆ ವಿದ್ಯುನ್ಮಂಡಳಿಯ ತುರ್ತು ಸಬೆ ಕರೆಯಲಾಗಿದೆ. ಅದರಲ್ಲಿ ವಿದ್ಯುತ್ ಸಚಿವರು ಭಾಗವಹಿಸುವರು. ಇದರಿಂದಾಗಿ ಲೋಡ್ ಶೆಡ್ಡಿಂಗ್ ಮತ್ತು ಪವರ್ ಕಟ್ ವಿಷಯದಲ್ಲಿ ನಾಳೆ ತೀರ್ಮಾನ ಉಂಟಾಗುವ ಸಾಧ್ಯತೆ ಇದೆ. ಮಂಡಳಿ ಸಬೆ ಕೈಗೊಳ್ಳುವ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಅಘೋಷಿತ ವಿದ್ಯತ್ ಲೋಡ್ ಶೆಡ್ಡಿಂಗ್‌ನ್ನು ಪ್ರತಿಭಟಿಸಿ ರಾಜ್ಯದ ಹಲವೆಡೆಗಳಲ್ಲಿ ಜನರು ವಿದ್ಯುತ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದ್ದವು.