ವಿಳಿಂಞಂ ಬಂದರು ಪ್ರಧಾನಮಂತ್ರಿ ಲೋಕಾರ್ಪಣೆ ಮೇ 2ರಂದು

ತಿರುವನಂತಪುರ: ವಿಳಿಂಞಂ ಅಂತಾರಾಷ್ಟ್ರೀಯ ಬಂದರು ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ ೨ರಂದು ಲೋಕಾರ್ಪಣೆ ಗೊಳಿಸುವರು. ಪ್ರಧಾನಮಂತ್ರಿಯ ಕಚೇರಿಯಿಂದ ಈ ವಿಷಯ ತಿಳಿಸಲಾಗಿದೆ. ಚಟುವಟಿಕೆ ಆರಂಭಿಸಿ 10 ತಿಂಗಳ ಬಳಿಕ ಔಪಚಾರಿಕ ಉದ್ಘಾಟನೆ ನಡೆಯಲಿದೆ. ರಾಜ್ಯ ಪಾಲ ರಾಜೇಂದ್ರ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜ ಯನ್, ಕೇಂದ್ರ ಸಚಿವ ಸರ್ಬಾನಂದ ಸೋನೇವಾಲ್, ರಾಜ್ಯ ಕೈಗಾರಿಕಾ ಸಚಿವ ಪಿ. ರಾಜೀವ್, ಬಂದರು ಸಚಿವ ವಿ.ಎನ್. ವಾಸವನ್, ಸಂಸದ ಶಶಿ ತರೂಪ್, ಉದ್ಯಮಿ ಗೌತಮ್ ಅದಾನಿ ಎಂಬಿವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕಳೆದ ಜುಲೈ 11ರಂದು ವಿಳಿಂಞಂ ಬಂದರಿಗೆ ಮೊದಲ ಹಡಗು ತಲು ಪಿತ್ತು. ಇದುವರೆಗೆ 250ಕ್ಕೂ ಅಧಿಕ ಹಡಗುಗಳು ಈ ಬಂದರಿಗೆ ತಲುಪಿದೆ. 5.25 ಲಕ್ಷ ಕಂಟೈನರ್ ಸರಕು ಸಾಗಾಟ ಇಲ್ಲಿ ನಡೆದಿದೆ. ವಿಶ್ವದ ಅತ್ಯಂತ ದೊಡ್ಡ ಸರಕು ಹಡಗಾಗಿರುವ ಎಂ.ಎಸ್.ಸಿ ತುರ್ಕಿ ವಿಳಿಂಞಂ ಬಂದರಿಗೆ ತಲುಪಿದೆ. ಕಳೆದ ಮಾರ್ಚ್ ತಿಂಗಳಲ್ಲಿ ೫೪ ಹಡಗುಗಳು ಇಲ್ಲಿಗೆ ತಲುಪಿದ್ದವು. ಇದರೊಂದಿಗೆ ಒಂದು ತಿಂಗಳಲ್ಲಿ 50 ಹಡಗುಗಳು ತಲುಪಿದ ಮೈಲಿಗಲ್ಲು ಈ ಬಂದರು ತನ್ನ ಹೆಸರಿಗೆ ಬರೆದುಕೊಂಡಿದೆ.

RELATED NEWS

You cannot copy contents of this page