ವಿವಾಹ ಭರವಸೆ ನೀಡಿ ಯುವತಿಗೆ ದೌರ್ಜನ್ಯ: ಯುವಕ ಕಸ್ಟಡಿಗೆ
ಆಲಪ್ಪುಳ: ವಿವಾಹ ಭರವಸೆ ನೀಡಿ ದೌರ್ಜನ್ಯಗೈದ ಬಗ್ಗೆ ನೀಡಿದ ದೂರಿನಲ್ಲಿ ಸೋಷ್ಯಲ್ ಮೀಡಿಯ ಇನ್‌ಫ್ಲು ವೆನ್ಸರ್‌ನನ್ನು ಕಸ್ಟಡಿಗೆ ತೆಗೆಯಲಾಗಿದೆ. ತೃಕ್ಕಣ್ಣನ್ ಎಂದು ಕರೆಯಲ್ಪಡುವ ಇರವುಕಾಡ್ ನಿವಾಸಿ ಹಾಫಿಸ್‌ನನ್ನು ಆಲಪ್ಪುಳ ಸೌತ್ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಮಂದಿ ಬೆಂಬಲಿಗರಿರುವ ವ್ಯಕ್ತಿಯಾಗಿದ್ದಾನೆ ಈತ. ಆಲಪ್ಪುಳ ನಿವಾಸಿಯಾದ ಯುವತಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ವಿವಾಹ ಭರವಸೆ ನೀಡಿ ರೀಲ್ಸ್ ತೆಗೆದು ದೌರ್ಜನ್ಯಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಾಫಿಸ್‌ನ ಬಂಧನ ಕೂಡಲೇ ದಾಖಲುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.