ವಿವಿಧ ಇಲಾಖೆಗಳು ಜಂಟಿಯಾಗಿ ಮಾರುಕಟ್ಟೆ ತಪಾಸಣೆ: ೪೫ ಅಂಗಡಿಗಳಲ್ಲಿ ಅವ್ಯವಹಾರ ಪತ್ತೆ

ಕಾಸರಗೋಡು: ಹಬ್ಬಗಳ ಸಮಯದಲ್ಲಿ ಕಾಳಸಂತೆ, ಸಾಮಗ್ರಿಯನ್ನು ಅನಗತ್ಯ ಸಂಗ್ರಹಿಸಿಡುವುದನ್ನು ತಡೆಹಿಡಿಯಲು ಜಿಲ್ಲೆಯ ವಿವಿಧ ಭಾಗಗಳಲ್ಲಾಗಿ ಕಂದಾಯ, ಸಾರ್ವಜನಿಕ ವಿತರಣೆ, ಲೀಗಲ್ ಮೆಟ್ರೋಲಜಿ ಎಂಬೀ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಸಾರ್ವಜನಿಕ ಮಾರುಕಟ್ಟೆಗಳಲ್ಲಿ ತಪಾಸಣೆ ನಡೆಸಿದರು. ಜಿಲ್ಲೆಯ ಒಟ್ಟು ೧೪೦ರಷ್ಟು ಅಂಗಡಿಗಳನ್ನು ಪರಿಶೀಲಿಸಿದರು. ಅವ್ಯವಹಾರ ಪತ್ತೆಹಚ್ಚಿದ ೪೫ರಷ್ಟು ಅಂಗಡಿಗಳಿಗೆ  ನೋಟೀಸ್ ನೀಡುವುದಕ್ಕಿರುವ ಕ್ರಮ ಕೈಗೊಂಡಿದ್ದಾರೆ.

ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಅಸಿಸ್ಟೆಂಟ್ ಕಲೆಕ್ಟರ್ ದಿಲೀಪ್ ಕೆ. ಕೈನಿಕ್ಕರ ಇವರ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಎಡಿಎಂಕೆ ನವೀನ್ ಬಾಬು, ಜಿಲ್ಲಾ ಸಪ್ಲೈ ಆಫೀಸರ್ ಎ. ಸಜಾದ್, ಮಂಜೇಶ್ವರ ತಾಲೂಕು ಸಪ್ಲೈ ಆಫೀಸರ್ ಕೆ.ಪಿ. ಸಜಿ ಮೋನ್, ರೇಶನಿಂಗ್ ಇನ್ಸ್‌ಪೆಕ್ಟರ್ ಪಿ. ಸುಧೀರ್, ಲೀಗಲ್ ಮೆಟ್ರೋಲಜಿ ಇನ್ಸ್‌ಪೆಕ್ಟರ್ ರಾಬರ್ಟ್ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page