ವಿವಿಧ ಕಡೆಗಳ ಬೂತ್‌ಗಳಲ್ಲಿರಾತ್ರಿ ತನಕ ಮುಂದುವರಿದ ಮತದಾನ

ಉಪ್ಪಳ: ಕಾಸರಗೋಡು ಲೋಕ ಸಭಾ ಕ್ಷೇತ್ರದ ಚುನಾವಣೆಯಂ ಗವಾಗಿ ಮತದಾನ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ಇಲ್ಲದೆ ಯಶಸ್ವಿ ಯಾಗಿ ನಡೆಯಿತು. ಮಂಜೇಶ್ವರ, ಕುಂಬಳೆ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಮತಗಟ್ಟೆಗಳಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಿದ್ದರು. ಆದರೆ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳದೆ ಮತದಾನ ವಿವಿಧ ಪಂಚಾಯತ್ನ ಹಲವು ಬೂತ್ಗಳಲ್ಲಿ ರಾತ್ರಿ ತನಕ ಮುಂದುವರಿದಿರುವುದಾಗಿ ತಿಳಿದುಬಂದಿದೆ. ಕೆಲವು ಬೂತ್ಗಳಲ್ಲಿ ಉದ್ಯೋಗಸ್ಥರ ಕೊರತೆ, ಇನ್ನು ಹೆಚ್ಚಿನ ಮತದಾರರು ವಿವಿಧ ಕಾರ್ಯಕ್ರಮಗಳನ್ನು ಮುಗಿಸಿ ಮಧ್ಯಾಹ್ನದ ಬಳಿಕ ಮತಗಟ್ಟೆಗೆ ತೆರಳಿದ್ದು, ಇದರಿಂದ ಭಾರೀ ಸರದಿ ಸಾಲು ಕಂಡುಬAದಿದ್ದು,ರಾತ್ರಿ ತನಕ ಮುಂದುವರಿಯಲು ಕಾರಣವೆ ನ್ನಲಾಗಿದೆ. ಪೈವಳಿಕೆ, ಮೀಂಜ, ಮಂಜೇಶ್ವರ, ವರ್ಕಾಡಿ, ಮಂಗಲ್ಪಾಡಿ ಪಂಚಾಯತ್ಗಳ ವಿವಿಧ ಬೂತ್ಗಳಲ್ಲಿ 6 ಗಂಟೆ ಬಳಿಕ ಮತದಾರರೂ ಸರದಿ ಸಾಲಿನಲ್ಲಿ ಕಂಡುಬAದಿದ್ದು, ಅವರಿಗೆ ಟೋಕನ್ ನೀಡಿ ಮತದಾನಕ್ಕೆ ಅವಕಾಶ ಮಾಡಲಾಗಿದೆ. ಪೈವಳಿಕೆ ಪಂಚಾಯತ್ನ ಬಾಯಾರು ಆವಳ ಎಎಲ್ಪಿ ಶಾಲೆಯ 123ನೇ ಬೂತ್ನಲ್ಲಿ 6 ಗಂಟೆಗೆ ಸುಮಾರು 200 ಮಂದಿ ಮತದಾನ ಮಾಡಲು ಉಳಿದಿದ್ದರು. ರಾತ್ರಿ 10 ಗಂಟೆಗೆ ಮತದಾನ ಮುಕ್ತಾಯಗೊಂಡಿದೆ. ಇದೇ ರೀತಿ ಚೇವಾರು ಶಾಲೆಯಲ್ಲಿ 8.30ರ ತನಕ, ಕುಡಾಲು ಎಎಲ್ಪಿ ಶಾಲೆಯಲ್ಲಿ 121ನೇ ಬೂತ್ನಲ್ಲಿ ರಾತ್ರಿ 8 ಗಂಟೆ, ಮಂಗಲ್ಪಾಡಿ ಪಂಚಾಯತ್ನ ಐಲ ಎಜೆಐ ಶಾಲೆಯ 86ನೇ ಬೂತ್ನಲ್ಲಿ ರಾತ್ರಿ 8 ಗಂಟೆ ಬಳಿಕವೇ ಮತದಾನ ಕೊನೆ ಗೊಂಡಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

You cannot copy content of this page