ವಿಷು ದಿನದಂದು ದುರಂತ: ಗರ್ಭಿಣಿ ಯುವತಿಯ ಕತ್ತು ಹಿಸುಕಿ ಕೊಲೆಗೈದ ಪತಿ

ವಿಶಾಖಪಟ್ಟಣ: ಆಂಧ್ರ ಪ್ರದೇಶದಲ್ಲಿ ಜಗಳ ಮಧ್ಯೆ ೮ ತಿಂಗಳ ಪ್ರಾಯದ ಗರ್ಭಿಣಿ ಯುವತಿಯನ್ನು ಪತಿ ಕತ್ತು ಹಿಸುಕಿ ಕೊಲೆಗೈದ ಘಟನೆ ನಡೆದಿದೆ. ವಿಶಾಖಪಟ್ಟಣದ ಉಡ ಕಾಲನಿಯಲ್ಲಿ ಘಟನೆ ನಡೆದಿದ್ದು, ಇಲ್ಲಿನ ಅನುಷ (27) ಮೃತಪಟ್ಟ ಗರ್ಭಿಣಿ ಯುವತಿ. ಪತಿ ಗ್ಯಾನೇಶರ್ (28) ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ನಿನ್ನೆ ಬೆಳಿಗ್ಗೆ ಇವರಿಬ್ಬರ ಮಧ್ಯೆ ವಾಗ್ವಾದ ಉಂಟಾಗಿ ಅದು ತೀವ್ರಗೊಂಡ ವೇಳೆ ಪತಿ ಪತ್ನಿಯ ಕತ್ತು ಹಿಸುಕಿದ್ದಾನೆ. ಪ್ರಜ್ಞಾಹೀನಳಾದ ಯುವತಿಯನ್ನು ಪತಿಯೇ ಆಸ್ಪತ್ರೆಗೆ ತಲುಪಿಸಿದನಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಬಳಿಕ ಗ್ಯಾನೇಶ್ ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ. ವಿಶಾಖಪಟ್ಟಣಂನಲ್ಲಿ ಹೋಟೆಲ್ ಮಾಲಕನಾಗಿದ್ದಾನೆ ಈತ. ಎರಡು ವರ್ಷಗಳ ಹಿಂದೆ ಇವರಿಬ್ಬರು ವಿವಾಹವಾಗಿದ್ದರು. ಹಲವು ಕಾಲ ಪ್ರೀತಿಸಿದ್ದ ಇವರು ತನ್ನ ಕುಡುಂಬಗಳ ವಿರೋಧವನ್ನೂ ಲೆಕ್ಕಿಸದೆ ವಿವಾಹವಾಗಿದ್ದರು.

Leave a Reply

Your email address will not be published. Required fields are marked *

You cannot copy content of this page