ವೈಟಿಂಗ್ ಲಿಸ್ಟ್ ಟಿಕೆಟ್‌ನೊಂದಿಗೆ ರೈಲ್ವೇ ರಿಸರ್ವೇಶನ್ ಬೋಗಿಗೆ ಹತ್ತಿದರೆ ದಂಡ: ಮೇ 1ರಿಂದ ಜ್ಯಾರಿಗೆ

ಹೊಸದಿಲ್ಲಿ: ವೈಟಿಂಗ್ ಲಿಸ್ಟ್ ಟಿಕೆಟ್ ಗಳೊಂದಿಗೆ ರೈಲುಗಳ ಸ್ಲೀಪರ್, ಎ.ಸಿ ಬೋಗಿಗಳಿಗೆ ಹತ್ತುವ ಪ್ರಯಾಣಿಕರಿಗೆ ಮೇ 1ರಿಂದ ಭಾರೀ ದಂಡ ಹೇರಲು ರೈಲ್ವೇ ಇಲಾಖೆ ನಿರ್ಧರಿಸಿದೆ. ದಂಡ ವಸೂಲು ಮಾಡಿದ ಬಳಿಕ ಅವರನ್ನು ಜನರಲ್ ಬೋಗಿಗೆ ಬದಲಾಯಿಸಲಾಗುವುದು. ಇದೇ ವೇಳೆ ರಿಸರ್ವೇಶನ್ ಖಚಿತಪಡಿಸಿದ ಪ್ರಯಾಣಿಕರ ಸುರಕ್ಷತೆ ಹಾಗೂ ಸುಗಮ ಪ್ರಯಾಣ ಖಚಿತಪಡಿಸಲಾಗುವುದೆಂದೂ ರೈಲ್ವೇ ತಿಳಿಸಿದೆ. ಈಗ ಸ್ಲೀಪರ್, ಎ.ಸಿ ಬೋಗಿಗಳಲ್ಲಿ ರಿಸರ್ವೇಶನ್ ಖಚಿತಗೊಳ್ಳದವರು ಆ ಬೋಗಿಗಳಿಗೆ ಹತ್ತಿ ಇತರರಿಗೆ ಖಚಿತಗೊಂಡ ಸೀಟುಗಳಲ್ಲಿ ಕುಳಿತುಕೊಳ್ಳುವುದು, ರಿಸರ್ವೇಶನ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಮಲಗುವುದು ನಿತ್ಯ ಕಂಡುಬರುತ್ತಿದೆ. ಇದರಿಂದ ರಿಸರ್ವ್ಡ್ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿರುವುದಾಗಿ  ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಈ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

You cannot copy contents of this page