ಕೆಎಸ್‌ಆರ್‌ಟಿಸಿ ಬಸ್‌ಗೆ ಸಂಚಾರ ತಡೆ ಸೃಷ್ಟಿಸಿ ಕಾರು ಚಾಲಕನ ಅಪಾಯಕರ ಸಂಚಾರ

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್‌ಗೆ ಮಾರ್ಗತಡೆ ಸೃಷ್ಟಿಸಿ ಗಂಟೆಗಳ ಕಾಲ ಕಾರು ಚಾಲಕ ಅಪಾಯಕರವಾದ ರೀತಿಯಲ್ಲಿ ಪ್ರಯಾಣಿಸಿದ ಬಗ್ಗೆ ದೂರಲಾಗಿದೆ. ಕಾಸರಗೋಡಿನಿಂದ ಕೋಟಯಂಗೆ ಹೊರಟ ಸ್ವಿಪ್ಟ್ ಬಸ್‌ಗೆ ಓವರ್‌ಟೇಕ್ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಕಾರನ್ನು ಚಲಾಯಿಸಿ ಈತ ಮಾರ್ಗತಡೆ ಸೃಷ್ಟಿಸಿದ್ದಾನೆನ್ನಲಾಗಿದೆ. ಇದರ ದೃಶ್ಯಗಳು ಬಹಿರಂಗಗೊಂಡಿರುವುದರೊಂದಿಗೆ ಟೀಕೆಗಳು ವ್ಯಕ್ತವಾಗಿವೆ. ಬಸ್ ಕಾರನ್ನು ಓವರ್‌ಟೇಕ್ ಮಾಡಲು ಯತ್ನಿಸಿರುವುದೇ ಕಾರುಚಾಲಕನಿಗೆ ದ್ವೇಷ ಉಂಟಾಗಲು ಕಾರಣವೆನ್ನಲಾಗಿದೆ.

ಉದುಮದಿಂದ 7 ಕಿಲೋ ಮೀಟರ್‌ವರೆಗೆ ಬಸ್‌ಗೆ ಮುಂದಕ್ಕೆ ಚಲಿಸಲು ಈತ ಅವಕಾಶ ನೀಡಲಿಲ್ಲ.  ನಿರಂತರ ಹಾರ್ನ್ ಮೊಳಗಿಸಿದರೂ ಬಸ್‌ಗೆ ಕಾರು ಚಾಲಕ ಸೈಡ್ ನೀಡಲಿಲ್ಲವೆನ್ನಲಾಗಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಚಾಲಕ ನೀಲೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರುಚಾಲಕನ ಬಗೆಗಿನ ಮಾಹಿತಿಗಳು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page