ವಿಪಕ್ಷ ಮುಖಂಡ ವಿ.ಡಿ. ಸತೀಶನ್‌ರ ಯಾತ್ರೆ ಯಶಸ್ವಿಗೆ ಕಾಂಗ್ರೆಸ್ ನಾಯಕತ್ವ ನಿರ್ಧಾರ

ಕಾಸರಗೋಡು: ವಿಪಕ್ಷ ಮುಖಂಡ ವಿ.ಡಿ. ಸತೀಶನ್ ನೇತೃತ್ವ ನೀಡುವ ಯಾತ್ರೆಯನ್ನು ಯಶಸ್ವಿಗೊಳಿಯಲು ಜರಗಿದ ಸಭೆಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಡಿಸಿಸಿ ಕಚೇರಿಯಲ್ಲಿ ಜರಗಿದ ಸಭೆಯಲ್ಲಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಸಿ. ಪ್ರಭಾಕರನ್ ಸ್ವಾಗತಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ನೀಲಕಂಠನ್, ಹಕೀಂ ಕುನ್ನಿಲ್, ಐಕ್ಯರಂಗ ಜಿಲ್ಲಾ ಸಂಚಾಲಕ ಎ. ಗೋವಿಂದನ್ ನಾಯರ್, ಸೋಮಶೇಖರ ಶೇಣಿ ಸಹಿತ ಹಲವಾರು ಮುಖಂಡರು ಮಾತನಾಡಿದರು.

ಕುಂಬಳೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮ, ಕಾಸರಗೋಡು, ಉದುಮ, ಕಾಞಂಗಾಡ್, ತೃಕರಿಪುರ ವಿಧಾನಸಭಾ ಮಂಡಲಗಳಲ್ಲಿ ನಡೆಯುವ ಸ್ವಾಗತ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

RELATED NEWS

You cannot copy contents of this page