ವೈದ್ಯನೆಂದು ತಿಳಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಯುವಕ ಸೆರೆ

ಕಲ್ಲಿಕೋಟೆ: ವಯನಾಡ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯನೆಂದು ತಿಳಿಸಿ ರೋಗಿಗಳ ತಪಾಸಣೆ ನಡೆಸಿದ ಯುವಕ ಸೆರೆಗೀಡಾಗಿದ್ದಾನೆ.

ಪೇರಾಂಬ್ರ ಮುದುಕಾಡ್ ನಿವಾಸಿ ಜೋಬಿನ್ ಎಂಬಾತನನ್ನು ವಯ ನಾಡ್ ಅಂಬಲವಯಲ್ ಪೊಲೀಸರು ಬಂಧಿಸಿದ್ದಾರೆ. ಕಲ್ಲೋಡು ಎಂಬಲ್ಲಿನ ಬಾಡಿಗೆ ಮನೆಯಿಂದ  ಈತನನ್ನು ಸೆರೆಹಿಡಿಯಲಾಗಿದೆ. ಪೇರಾಂಬ್ರ ಹಾಗೂ ಇತರ  ಕೆಲವೆಡೆಗಳಲ್ಲಿರುವ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಜೋಬಿನ್ ಕೆಲಸ ನಿರ್ವಹಿಸಿದ್ದನು ಎಂದು  ತನಿಖೆಯಲ್ಲಿ ತಿಳಿದುಬಂದಿದೆ.  ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಜೋಬಿನ್ ಅಂಬಲವಯಲ್‌ನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನೆಂದು ತಿಳಿಸಿ ರೋಗಿಗಳನ್ನು ತಪಾಸಣೆ ನಡೆಸಿ ಚಿಕಿತ್ಸೆ ನೀಡಿರುವುದಾಗಿ ಹೇಳಲಾಗುತ್ತಿದೆ.

You cannot copy contents of this page