ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿರುವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕೊಚ್ಚಿ: ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾ ಗಿರುವ ಪೊಲೀಸ್ ಇನ್‌ಸ್ಪೆಕ್ಟರ್ ನೇಣುಬಿಗಿದು ಸಾವ ನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೆಡುಮಾಂಙಾಡ್  ನಿವಾಸಿ ಹಾಗೂ ಮಲಯಿಲ್‌ಕೀಳ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಆಗಿದ್ದ ಸೈಜು ಎಂ.ವಿ ಸಾವನ್ನಪ್ಪಿದ ಅಧಿಕಾರಿ. ಕೊಚ್ಚಿ ಅಂಬೇಡ್ಕರ್ ಕ್ರೀಡಾಂಗಣ ಪರಿಸರದ ಮರದ ರೆಂಬೆಯಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಸೈಜು ಇಂದು ಬೆಳಿಗ್ಗೆ ಪತ್ತೆಯಾಗಿ ದ್ದಾರೆ.

ವೈದ್ಯೆಯೊಂದಿಗೆ ಸಾಂಗತ್ಯ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಸೈಜು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಜಾಮೀನು ಲಭಿಸಲು ಪೊಲೀಸ್ ಠಾಣೆಯ ಜಿ.ಡಿ ರಿಜಿಸ್ಟ್ರಾ ರ್‌ನಲ್ಲಿ ನಕಲಿಯಾಗಿ ತಿದ್ದುಪಡಿ ತಂದಿದ್ದು ಅದೂ ತನಿಖೆಯಲ್ಲಿ ಪತ್ತೆಯಾಗಿತ್ತು.

ಈ ಪ್ರಕರಣದ ತನಿಖೆಯನ್ನು ಬಳಿಕ ಕ್ರೈಂ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಅದರಂತೆ  ಸೈಜುರನ್ನು ಪೊಲೀಸರು ಬಂಧಿಸುವ ಕ್ರಮದಲ್ಲಿ ತೊಡಗಿರುವಂತೆಯೇ ಸೈಜು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ವೈದ್ಯೆ ಮಾತ್ರವಲ್ಲ ಇನ್ನೋರ್ವೆ ಯುವತಿಯೂ ಇದೇ ರೀತಿ ದೂರು ನೀಡಿದ್ದರು.

RELATED NEWS

You cannot copy contents of this page