ಕುಂಬಳೆ: ಹೊಯ್ಗೆಯ ರೀತಿಯಲ್ಲೇ ಅನಧಿಕೃತವಾಗಿ ಮಣ್ಣು ಸಾಗಾಟ ದಂಧೆಯು ವ್ಯಾಪಕಗೊಂಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಣ್ಣು ಸಾಗಿಸುತ್ತಿದ್ದ ಒಂದು ಟಿಪ್ಪರ್ ಲಾರಿ ಹಾಗೂ ಮಣ್ಣು ತೆಗೆಯಲು ಬಳಸಿದ ಜೆಸಿಬಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂದ್ಯೋಡು ಮೀಪ್ರಿಯಿಂದ ಅನಧಿಕೃತವಾಗಿ ಮಣ್ಣು ಸಾಗಾಟ ನಡೆಯುತ್ತಿದೆಯೆಂಬ ಬಗ್ಗೆ ನಿನ್ನೆ ಕುಂಬಳೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್ಐ ಅನೂಪ್ ಸ್ಟೀಫನ್, ಎಎಸ್ಐ ಅತುಲ್ರಾಂ ಎಂಬಿವರ ನೇತೃತ್ವದಲ್ಲಿ ಪೊಲೀಸರು ಅಲ್ಲಿಗೆ ದಾಳಿ ನಡೆಸಿದಾಗ ಮಣ್ಣು ಸಾಗಾಟ ಪತ್ತೆಹಚ್ಚಲಾಗಿದೆ. ಇದೇ ವೇಳೆ ಈ ಕೆಲಸದಲ್ಲಿ ನಿರತರಾಗಿದ್ದ ಜಾರ್ಖಂಡ್ ನಿವಾಸಿಗಳಾದ ಸಹಜಾದ್ (21) ಹಾಗೂ ಮೊಹಮ್ಮದ್ ಅರ್ಬಾಸ್ (23) ಎಂಬಿವರನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದು ಬಳಿಕ ಅವರಿಗೆ ನೋಟೀಸು ನೀಡಿ ಬಿಡುಗಡೆಗೊಳಿಸ ಲಾಗಿದೆ. ಪ್ರಕರಣವನ್ನು ಜಿಯೋ ಲಜಿ ಇಲಾಖೆಗೆ ಹಸ್ತಾಂತರಿಸುವು ದಾಗಿ ಪೊಲೀಸರು ತಿಳಿಸಿದ್ದಾರೆ.





