ವ್ಯಾಪಾರಿ ಮನೆಯೊಳಗೆ ನೇಣು ಬಿಗಿದು ಸಾವು

ಕಾಸರಗೋಡು: ವ್ಯಾಪಾರಿಯೊ ಬ್ಬರು ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬೇಡಗದಲ್ಲಿ ಜೀನಸು ಅಂಗಡಿ ನಡೆಸುವ ವಲಿಯಡ್ಕಂನ ವಿನೀಶ್ ಬಾಬು (45) ಸಾವಿಗೀಡಾದ ವ್ಯಕ್ತಿ.

ನಿನ್ನೆ ಮಧ್ಯಾಹ್ನ 1 ಗಂಟೆಗೆ ವಿನೀಶ್ ಬಾಬು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಅದನ್ನು ಕಂಡ ತಾಯಿ ಬೊಬ್ಬೆ ಹಾಕಿದ್ದು, ಅಷ್ಟರಲ್ಲಿ ತಲುಪಿದ ನೆರೆಮನೆ ನಿವಾಸಿಗಳು ಬಾಬುರನ್ನು ಕೆಳಗಿಳಿಸಿ ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ  ರಕ್ಷಿಸಲಾಗಲಿಲ್ಲ.

ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸತ್ರೆಯಲ್ಲಿ ನಡೆಸಲಾಯಿತು. ಬೇಡಗಂನ ದಿ| ನಾರಾಯಣನ್ ಎಂಬವರ ಪುತ್ರನಾದ ಮೃತರು  ತಾಯಿ ಸರೋಜಿನಿ, ಪತ್ನಿ ಪವಿತ್ರ, ಮಕ್ಕಳಾದ ಆದಿದೇವ್, ದೇವಾಂಜನ ಅಯಾನ್, ಸಹೋದರ ಸುನಿಲ್, ಸಹೋದರಿ ಸುಮಲತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page