ವ್ಯಾಪಾರ ಸಂಸ್ಥೆಯಿಂದ 60 ಸಾವಿರ ರೂ. ಮೌಲ್ಯದ ಸಾಮಗ್ರಿ ಕಳವು
ಕಾಸರಗೋಡು: ನಗರದ ಬ್ಯಾಂಕ್ ರಸ್ತೆ ಬಳಿಯ ಕಟ್ಟಡವೊಂದರಲ್ಲಿ ಕಾರ್ಯ ವೆಸಗುತ್ತಿರುವ ಹೊಸದುರ್ಗದ ರಾಮ ಕೃಷ್ಣನ್ ಎಂಬವರ ಮಾಲಕತ್ವದ ಅಂಗಡಿ ಯಿಂದ ಸುಮಾರು ೬೦ ಸಾವಿರ ರೂ. ಮೌಲ್ಯದ ಎರಡು ಇಲೆಕ್ಟ್ರಿಕಲ್ ಮೋಟಾರ್, ವಾಟರ್ ಟ್ಯಾಂಕ್, ಪಿವಿಸಿ ಪೈಪ್‌ಗಳು ಮತ್ತು ಕಬ್ಬಿಣದ ಸ್ಟ್ಯಾಂಡ್ ಗಳನ್ನು ಕಳವುಗೈದಿರುವುದಾಗಿ ಕಾಸರಗೋ ಡು ಪೊಲೀಸರಿಗೆ ದೂರು ನೀಡಲಾಗಿದೆ. ಈ ತಿಂಗಳ 13ರಂದು ರಾತ್ರಿ ಕಳವು ನಡೆದಿದೆ. ಇಬ್ಬರು ಈ ಕೃತ್ಯ ವೆಸಗಿರುವು ದಾಗಿ ಸಂಶಯಿಸುವುದಾಗಿ ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.