ಶಬರಿಮಲೆ: ತುಲಾಮಾಸ ಪೂಜೆ 17ರಿಂದ

ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ತುಲಾಮಾಸ ಪೂಜೆಗಳು ಅ.17ರಿಂದ 21ರವರೆಗೆ ನಡೆಯಲಿದೆ. ಇದರಂಗವಾಗಿ ೧೬ರಂದು ಸಂಜೆ 5 ಗಂಟೆಗೆ ಕ್ಷೇತ್ರದ ಬಾಗಿಲು ತೆರೆಯಲಾಗುವುದು. ಅಂದು ರಾತ್ರಿ 10 ಗಂಟೆವರೆಗೆ ತೀರ್ಥಾಟಕರಿಗೆ ದರ್ಶನ ನಡೆಸಬಹುದಾಗಿದೆ. 21ರಂದು ರಾತ್ರಿ 10 ಗಂಟೆಗೆ ಬಾಗಿಲು ಮುಚ್ಚಲಾಗುವುದು. ಇದೇ ವೇಳೆ ಹೊಸ ಮುಖ್ಯ ಅರ್ಚಕರ ಆಯ್ಕೆ 17ರಂದು ಬೆಳಿಗ್ಗೆ ಉಷಃಪೂಜೆ ನಂತರ ಸನ್ನಿಧಾನದಲ್ಲಿ ನಡೆಯಲಿದೆ. ಶಬರಿಮಲೆ, ಮಾಳಿಗಪುರಂ ಕ್ಷೇತ್ರಗಳ ಮುಖ್ಯ ಅರ್ಚಕರನ್ನು ಈ ಬಾರಿಯೂ ಚೀಟಿ ಎತ್ತುವಿಕೆ ಮೂಲಕ ಆರಿಸಲಾಗುವುದು.

ದರ್ಶನ ಮುಂಜಾನೆ 3ರಿಂದ

ಶಬರಿಮಲೆ: ಕ್ಷೇತ್ರದಲ್ಲಿ ದರ್ಶನ ನಡೆಸಲಿರುವ ಸಮಯವನ್ನು ಅರ್ಧ ಗಂಟೆ ಹೆಚ್ಚಿಸಲಾಗಿದೆ. ಇದರಂತೆ ಇನ್ನು ಮುಂದೆ ಮುಂಜಾನೆ 3ರಿಂದ ಮಧ್ಯಾಹ್ನ 1 ಗಂಟೆವರೆಗೆ ಅಪರಾಹ್ನ 3ರಿಂದ ರಾತ್ರಿ 11 ಗಂಟೆವರೆಗೆ ಭಕ್ತರಿಗೆ ದರ್ಶನ ನಡೆಸಬಹುದಾಗಿದೆ.

Leave a Reply

Your email address will not be published. Required fields are marked *

You cannot copy content of this page