ಶಬರಿಮಲೆ ಪ್ರಸಾದ ಇನ್ನು ಅಂಚೆ ಮೂಲಕ ದೇಶದ ಎಲ್ಲಿ ಬೇಕಾದರೂ ಲಭಿಸಲಿದೆ

ಶಬರಿಮಲೆ: ಶಬರಿಮಲೆ ಪ್ರಸಾದ ಇನ್ನು ದೇಶದ ಎಲ್ಲಿ ಬೇಕಾದರೂ ಲಭಿಸಲಿದೆ. ಇದಕ್ಕಾಗಿ ಪ್ರಸಾದ ಕಿಟ್ ಮೂಲಕ ತಲುಪಿಸುವ ಅಗತ್ಯದ ಕ್ರಮೀಕರಣವನ್ನು ಬಹುತೇಕ ಅಂಚೆ ಇಲಾಖೆ ನಡೆಸಿದೆ. ಅರವಣ ಅಪ್ಪ ಇತ್ಯಾದಿ ಪ್ರಸಾದಗಳು, ತುಪ್ಪ, ಭಸ್ಮ, ಅರ್ಚನೆ ಪ್ರಸಾದ ಮಾತ್ರವಲ್ಲ ಮಾಳಿಗಪುರಂನ ಪ್ರಸಾದವೂ ಅಂಚೆ ಮೂಲಕ ಇನ್ನು ದೇಶದ ಎಲ್ಲಾ ಕಡೆಗಳಲ್ಲೂ ಲಭಿಸಲಿದೆ.

ಇದರಂತೆ ಒಂದು ಟಿನ್ ಅರವಣ ಪಾಯಸ ಒಳಗೊಂಡ ಕಿಟ್  520 ರೂ, 4 ಟಿನ್ ಅರವಣ ಪಾಯಸ ಒಳಗೊಂಡ ಕಿಟ್‌ಗೆ 960 ರೂ, 10 ಅರವಣ ಪಾಯಸ ಟಿನ್ ಒಳಗೊಂಡ ಕಿಟ್ 1760 ರೂ. ದರದಲ್ಲಿ ಲಭಿಸಲಿದೆ. ಮುಜರಾಯಿ ಮಂಡಳಿ ಮತ್ತು ಭಾರತೀಯ ಅಂಚೆ ಇಲಾಖೆ ಇದನ್ನು ಜ್ಯಾರಿಗೊಳಿಸಲಿದೆ. ಪ್ರಸಾದಕ್ಕಾಗಿ ದೇಶದ ಅದ್ಯಾವುದೇ ಅಂಚೆ ಕಚೇರಿಯಲ್ಲೂ ಬುಕ್ ಮಾಡಬಹುದು.

RELATED NEWS

You cannot copy contents of this page