ಶಬರಿಮಲೆ: ಭಕ್ತರಿಗೆ ನೇರ ಬುಕ್ಕಿಂಗ್ ಸೌಕರ್ಯ

ಪತ್ತನಂತಿಟ್ಟ: ಶಬರಿಮಲೆಯಲ್ಲಿ ವರ್ಚುವಲ್ ಸರದಿಯಲ್ಲಿ  ಬುಕ್ ಮಾಡದೆ ದರ್ಶನಕ್ಕೆ ತಲುಪುವ ಶ್ರೀ ಅಯ್ಯಪ್ಪ ಭಕ್ತರಿಗೆ ನೇರವಾಗಿ ಆನ್‌ಲೈನ್ ಬುಕ್ಕಿಂಗ್ ಸೌಕರ್ಯ ದೇವಸ್ವಂ ಬೋರ್ಡ್ ಸಿದ್ಧಪಡಿಸಿದೆ. ಪಂಪಾದಲ್ಲಿ ಮಣಪ್ಪುರಂ, ಎರುಮೇಲಿ, ವಂಡಿಪೆರಿಯಾರ್ ಸತ್ರ ಎಂಬೆಡೆಗಳಲ್ಲಿ ನೇರವಾಗಿ ಆನ್‌ಲೈನ್ ಬುಕ್ಕಿಂಗ್ ಸೌಕರ್ಯ ವಿದೆ. ಆಧಾರ್ ಕಾರ್ಡ್ ಸಹಿತ ಈ ಕೇಂದ್ರಗಳಿಗೆ ತಲುಪಿದರೆ ಭಾವಚಿತ್ರ ತೆಗೆದು ವರ್ಚುವಲ್ ಸರದಿಯ ಅದೇ ರೀತಿಯಲ್ಲಿ ಬುಕ್ಕಿಂಗ್ ನಡೆಸಿ ಭಕ್ತರನ್ನು ಮಲೆ ಏರಲು ಬಿಡಲಾಗುವುದು. ಪುಲ್ಲುಮೇಡ್ ಮೂಲಕ  ತಲುಪುವ ಭಕ್ತರಿಗೆ ವಂಡಿಪೆರಿಯಾರ್‌ನಲ್ಲಿರುವ ಸತ್ರದಲ್ಲಿ ನೇರ ಬುಕ್ಕಿಂಗ್ ಸೌಕ ರ್ಯವನ್ನು ಉಪಯೋಗಿಸಿಕೊಳ್ಳಬ ಹುದಾಗಿದೆ. ಈಗ ದಿನಕ್ಕೆ ವರ್ಚು ವಲ್ ಕ್ಯೂ ಮೂಲಕ ೭೦ ಸಾವಿರ ಭಕ್ತರು ಹಾಗೂ ನೇರ ಬುಕ್ಕಿಂಗ್ ಮೂಲಕ 10 ಸಾವಿರದಷ್ಟು ಭಕ್ತರನ್ನು ಮಲೆ ಏರಲು ಬಿಡಲಾಗುವುದು. ಶಬರಿಮಲೆಗೆ ತೆರಳುವಾಗ ಆಧಾರ್ ಕಾರ್ಡ್, ವರ್ಚುವಲ್ ಬುಕ್ಕಿಂಗ್ ಮಾಡಿದ್ದರೆ ಅದರ ಸ್ಲಿಪ್ ಅಥವಾ ಮೊಬೈಲ್‌ನಲ್ಲಿ ಅದರ ಪಿಡಿಎಫ್ ಎಂಬಿವು ಇಟ್ಟುಕೊಳ್ಳಬೇಕಾಗಿ ದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page