ಶಬರಿಮಲೆ: ಮಂಡಲ ಪೂಜೆ ತೀರ್ಥಾಟನಾ ಋತು ನಾಳೆಯಿಂದ
ಶಬರಿಮಲೆ: ಶಬರಿಮಲೆಯಲ್ಲಿ ಮಂಡಲ ಪೂಜೆ ತೀರ್ಥಾಟನಾ ಋತು ನಾಳೆ ಆರಂಭಗೊಳ್ಳಲಿದೆ. ಶಬರಿಮಲೆಯ ಹಾಲಿ ಪ್ರಧಾನ ಅರ್ಚಕರಾದ ಪಿ.ಎನ್ ಮಹೇಶ್ ನಂಬೂದಿರಿಯವರು ಶ್ರೀ ಕ್ಷೇತ್ರದ ತಂತ್ರಿವರ್ಯರುಗಳ ಸಾನ್ನಿಧ್ಯದಲ್ಲಿ ನಾಳೆ ಸಂಜೆ 4 ಗಂಟೆಗೆ ತುಪ್ಪ ದೀಪ ಬೆಳಗಿಸುವ ಮೂಲಕ ಮಂಡಲ ಜ್ಯೋತಿ ಋತುಗೆ ಚಾಲನೆ ದೊರಕಲಿದೆ. ತೀರ್ಥಾಟಕರನ್ನು ನಾಳೆ ಬೆಳಿಗ್ಗೆ 11 ಗಂಟೆಯಿಂದ ಪಂಪಾದಿಂದ ಸನ್ನಿಧಾನಕ್ಕೆ ಸಾಗಬಿಡಲಾಗುವುದು. ರಾತ್ರಿ 11 ಗಂಟೆಗೆ ಶ್ರೀ ಕ್ಷೇತ್ರದ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ನ.16ರಂದು ಮುಂಜಾನೆ 3 ಗಂಟೆಗೆ ನೂತನ ಪ್ರಧಾನ ಅರ್ಚಕ ಎಸ್. ಅರುಣ್ ಕುಮಾರ್ ನಂಬೂದಿರಿ ಆ ಸ್ಥಾನವನ್ನು ವಿದ್ಯುಕ್ತವಾಗಿ ವಹಿಸುವರು. ಈ ಬಾರಿ ದೈನಂದಿನ 18 ತಾಸುಗಳ ತನಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಡಿಸೆಂಬರ್ ೨೬ರಂದು ಮಂಡಲ ಪೂಜೆ ಹಾಗೂ ಜನವರಿ 14ರಂದು ಮಕರಜ್ಯೋತಿ ಉತ್ಸವ ನಡೆಯಲಿದೆ.