ಶಾಂತಿಪಳ್ಳ ರಸ್ತೆಯಲ್ಲಿ ಮಗುಚಿ ಬಿದ್ದ ಬೈಕ್ಗಳು ಅಪಾಯ ತಪ್ಪಿಸಿದ ಅಗ್ನಿಶಾಮಕ ದಳ
ಕುಂಬಳೆ: ಶಾಂತಿಪಳ್ಳ ರಸ್ತೆಯಲ್ಲಿ ನಿನ್ನೆ ಬೆಳಿಗ್ಗೆ ಬೈಕ್ಗಳು ಮಗುಚಿ ಬಿದ್ದುದರಿಂದ ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ರಸ್ತೆಯನ್ನು ತೊಳೆದು ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಹೆಚ್ಚಿನ ಅಪಾಯ ತಪ್ಪಿಸಿದೆ.
ಶಾಂತಿಪಳ್ಳ ಪೆಟ್ರೋಲ್ ಪಂಪ್ಬಳಿ ನಿನ್ನೆ ಬೆಳಿಗ್ಗೆ ದ್ವಿಚಕ್ರ ವಾಹನಗಳು ಮಗುಚಿ ಬಿದ್ದಿವೆ. ರಸ್ತೆಯಲ್ಲಿ ಪೆಟ್ರೋಲ್ ಅಥವಾ ಆಯಿಲ್ ಚೆಲ್ಲಿದುದರಿಂದ ಈ ಅಪಘಾತ ಉಂಟಾಗಿದೆ ಎಂದು ತಿಳಿದು ಅಗ್ನಿಶಾಮಕದಳ ರಸ್ತೆಯಲ್ಲಿ ಅಪಾಯ ಭೀತಿಯನ್ನು ಹೊರತುಪಡಿಸಿದೆ.