ಶಾಲಾ ಮೈದಾನದಲ್ಲಿ ಅಡ್ಡಾದಿಡ್ಡಿ ಸಂಚರಿಸಿ ಅಪಾಯ ಭೀತಿ: ಎರಡು ಕಾರುಗಳ ವಶ
ಕುಂಬಳೆ: ಬಂಬ್ರಾಣ ಜಿಬಿಎಲ್‌ಪಿ ಶಾಲಾ ಮೈದಾನದಲ್ಲಿ ಅಡ್ಡಾದಿಡ್ಡಿ ಸಂಚರಿಸಿ ಅಪಾಯ ಭೀತಿ ಸೃಷ್ಟಿಸಿದ ಎರಡು ಕಾರುಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ., ಅಲ್ಲದೆ ಓರ್ವ ಅಪ್ರಾಪ್ತನ ಸಹಿತ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ 14ರಂದು ಮಧ್ಯಾಹ್ನ 2.25ರ ವೇಳೆ ಎರಡು ಕಾರುಗಳು ಶಾಲಾ ಮೈದಾನಕ್ಕೆ ತಲುಪಿ ಅಪಾಯ ಸೃಷ್ಟಿಯಾಗುವ ರೀತಿಯಲ್ಲಿ ಅಡ್ಡಾದಿಡ್ಡಿ ಸಂಚರಿಸಿದೆಯೆಂದು ದೂರಲಾಗಿದೆ. ಈ ಬಗ್ಗೆ ಮುಖ್ಯೋಪಾಧ್ಯಾಯ ಸತ್ಯಪ್ರಕಾಶ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಕಾರುಗಳನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದು ಅವುಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.