ಶಾಲೆಗಳಲ್ಲಿ ಸಂಭ್ರಮದ ಪ್ರವೇಶೋತ್ಸವ

ಕಾಸರಗೋಡು: ಜ್ಞಾನದ ಹಸಿವು ನೀಗಿಸಲು ಜೊತೆಯಾಗಿ ಕಲಿಯಲು ವಿದ್ಯಾರ್ಥಿಗಳು ಶಾಲಾ ಅಂಗಣಕ್ಕೆ ತಲುಪುವಾಗ ಅವರನ್ನು ಸ್ವಾಗತಿಸುವುದಕ್ಕಾಗಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಸಜ್ಜಾಗಿ ನಿಂತಿವೆ. ಒಂದುಗೂಡಿ, ಒಂದಾಗಿ, ಒಂದಾಗುವ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿಗಳನ್ನು ವಿದ್ಯಾಲಯಗಳು ಸ್ವಾಗತಿಸಿವೆ. ಜಿಲ್ಲಾಮಟ್ಟದ ಶಾಲಾ ಪ್ರವೇಶೋತ್ಸವ ಮಡಿಕೈ ಜಿವಿಎಚ್‌ಎಸ್‌ಎಸ್‌ನಲ್ಲಿ ಇಂದು ಬೆಳಿಗ್ಗೆ ಜರಗಿತು.  ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ  ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಶಾಸಕರು ಸಹಿತ ಹಲವು ಗಣ್ಯರು ಭಾಗವಹಿಸಿದರು. ಇದರ ಹೊರತಾಗಿ ಜಿಲ್ಲೆಯ 592 ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶೋತ್ಸವ ನಡೆಯಿತು. ಸಂಪೂರ್ಣವಾಗಿ ಹಸಿರು ಪ್ರೊಟೋಕಾಲ್ ಪಾಲಿಸಿಕೊಂಡಿರುವ ಚಟುವಟಿಕೆಗಳನ್ನು ಪ್ರವೇಶೋತ್ಸವದಂಗವಾಗಿ ಸಿದ್ದಪಡಿಸಲಾಗಿತ್ತು. ಇಂದಿನಿಂದ ಎರಡು ವಾರಗಳ ಕಾಲ ಪ್ರತೀ ದಿನ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಒಂದು ಗಂಟೆ ಕಾಲ ತಿಳುವಳಿಕೆ ತರಗತಿ ನೀಡಲಾಗುವುದು. 

ನೂತನ ಶೈಕ್ಷಣಿಕ ವರ್ಷ ಆರಂಭಿಸುವಾಗ ಹಲವು ಬದಲಾವಣೆಗಳನ್ನು ಜ್ಯಾರಿಗೆ ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶಾಲಾ ಚಟುವಟಿಕೆ ಸಮಯವನ್ನು ಹೆಚ್ಚಿಸುವುದು, ಸಿಲೆಬಸ್‌ನ ಹೊರತಾದ ವಿಷಯಗಳನ್ನು ಕಲಿಸುವುದು, ಶಾಲೆಗಳಲ್ಲಿ ದೂರು ಪೆಟ್ಟಿಗೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಚಟುವಟಿಕೆ ಸಮಯ ಅರ್ಧ ಗಂಟೆ ಹೆಚ್ಚಿಸಲಾಗಿದೆ. ಇದರಂತೆ ಇನ್ನು ಮುಂದೆ ಬೆಳಿಗ್ಗೆ 9.45ರಿಂದ ಸಂಜೆ 4.15ರ ವರೆಗೆ ಚಟುವಟಿಕೆ ಸಮಯ ವಾಗಿರುವುದು.  ಶಾಲೆ ಆರಂಭದ ಮುಂಜಾ ಗ್ರತಾ ಕ್ರಮದಂಗವಾಗಿ ಶಾಲೆ ಕಟ್ಟ ಡಗಳ, ವಾಹನಗಳ ಫಿಟ್ನೆಸ್ ಮೊದಲಾ ದವುಗ ಳನ್ನು ಈಗಾಗಲೇ ಪೂರ್ತಿಗೊಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page