ಶಿಕ್ಷಣ ಸಚಿವ ಶಿವನ್ ಕುಟ್ಟಿ 14, 15ರಂದು ಜಿಲ್ಲೆಯಲ್ಲಿ
ಕಾಸರಗೋಡು: ರಾಜ್ಯ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಈ ತಿಂಗಳ 14ರಂದು ಕಾಸರಗೋಡಿಗೆ ಆಗಮಿಸಿ ಜಿಲ್ಲೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಫೆ.14ರಂದು ಬೆಳಿಗ್ಗೆ 9.15ಕ್ಕೆ ಮಂಜೇಶ್ವರ ಕುಂಜತ್ತೂರು ಜಿಎಲ್ಪಿ ಶಾಲೆಗಾಗಿ ಕಣ್ವತೀರ್ಥದಲ್ಲಿ ನಿರ್ಮಿಸಲಾಗಿರುವ ಹೊಸ ಕಟ್ಟಡದ ಉದ್ಘಾಟನೆಯನ್ನು ಸಚಿವರು ನೆರವೇರಿಸುವರು. 10.15ಕ್ಕೆ ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೊಸ ಕಟ್ಟಡ, 11.15ಕ್ಕೆ ಬಂಬ್ರಾಣ ಜಿಎಲ್ಸಿ ಶಾಲೆಯ ಕಟ್ಟಡಗಳನ್ನು ಸಚಿವರು ಉದ್ಘಾಟಿಸುವರು.
ಮಧ್ಯಾಹ್ನ 2 ಗಂಟೆಗೆ ಮೊಗ್ರಾಲ್ ಕಂಬಾರ್ ಸರಕಾರಿ ಎಲ್ಪಿ ಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸುವರು. ಅಪರಾಹ್ನ 3ಕ್ಕೆ ಬೋವಿಕ್ಕಾನ ಐಡೆಡ್ ಶಾಲೆಯ ಕಟ್ಟಡ, 3.45ಕ್ಕೆ ಕಾನತ್ತೂರು ಸರಕಾರಿ ಯುಪಿ ಶಾಲಾ ಕಟ್ಟಡ, ಸಂಜೆ 5ಕ್ಕೆ ಕುಟ್ಟಿಕ್ಕೋಲು ಸರಕಾರಿ ಹೈಸ್ಕೂಲಿನ ನೂತನ ಕಟ್ಟಡಗಳ ಉದ್ಘಾಟನೆಯನ್ನು ಸಚಿವರು ನೆರವೇರಿಸುವರು.
ಫೆ.15ರಂದು ಮಧ್ಯಾಹ್ನ 12 ಗಂಟೆಗೆ ಕುಲೇರಿ ಜಿಎಲ್ಪಿ ಶಾಲಾ ಕಟ್ಟಡ, ಅಪರಾಹ್ನ 3ಕ್ಕೆ ಪಡನ್ನ ಯುಪಿ ಶಾಲಾ ಕಟ್ಟಡಗಳನ್ನು ಸಚಿವರು ಉದ್ಘಾಟಿಸುವರು. ಸಂಜೆ 4.30ಕ್ಕೆ ರಾಜ್ಯ ಕಾರ್ಮಿಕ ಇಲಾಖೆ ಪಿಲಿಕೋಡಿನಲ್ಲಿ ನಿರ್ಮಿಸಿರುವ ಐಟಿಐ ಕಟ್ಟಡದ ಉದ್ಘಾಟನೆಯನ್ನು ಸಚಿವರು ನೆರವೇರಿಸುವರು.