ಶಿಕ್ಷಣ ಸಾಲ ಲಭಿಸದ ವ್ಯಥೆ: ವಿದ್ಯಾರ್ಥಿ ವಿಷ ಸೇವಿಸಿ ಸಾವು
ಕಾಸರಗೋಡು: ನರ್ಸಿಂಗ್ ಶಿಕ್ಷಣಕ್ಕೆ ಬ್ಯಾಂಕ್ ಸಾಲ ಲಭಿಸದೆ ದುಃಖದಿಂದ ವಿದ್ಯಾರ್ಥಿಯೋರ್ವ ವಿಷ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಪೆರುಂಬಡವು ಅಡ್ಕ ನಾಯ್ಕುನ್ನು ಅಕ್ಕರಯಡುಪ್ಪಿಲ್ ಹೌಸ್‌ನ ಬಿನೋಯ್ ಎಂಬವರ ಪುತ್ರ ಎಬಿನ್ (18) ಮೃತಪಟ್ಟ ವಿದ್ಯಾರ್ಥಿ. ಪ್ಲಸ್‌ಟು ಬಳಿಕ ಈತ ನರ್ಸಿಂಗ್ ಕೋರ್ಸ್‌ಗೆ ಸೇರಲು ಆಗ್ರಹಿಸಿದ್ದನೆನ್ನಲಾಗಿದೆ. ಇದರಿಂದ ಶಿಕ್ಷಣ ಸಾಲಕ್ಕಾಗಿ ಬ್ಯಾಂಕ್‌ನ್ನು ಸಮೀಪಿಸಿದ್ದರೂ ಬಡ ಕುಟುಂಬ ವಾದುದರಿಂದ ಸಾಲ ಲಭಿಸಿಲ್ಲ. ಇದರಿಂದ ಎಬಿನ್ ತಳಿಪರಂಬದ ಕಂಪ್ಯೂಟರ್ ಸಂಸ್ಥೆಯಲ್ಲಿ ಸೇರಿದನು. ಆದರೂ ನರ್ಸಿಂಗ್ ಕೋರ್ಸ್‌ಗೆ ಸೇರಲಾಗದುದರಿಂದ ತೀವ್ರನೊಂ ದುಕೊಂಡಿದ್ದನೆನ್ನಲಾಗಿದೆ.
ನವಂಬರ್ 24ರಂದು ಈತ ವಿಷ ಸೇವಿಸಿದ್ದನು. ಇದರಿಂದ ಮನೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಈತನನ್ನು ಮಂಗ ಳೂರಿನ ಆಸ್ಪತ್ರೆಗೆ ತಲುಪಿಸಿದಾಗಲೇ ವಿಷ ಸೇವಿಸಿದ ವಿಷಯ ತಿಳಿದು ಬಂದಿದೆ. ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಎಬಿನ್ ಮೃತಪಟ್ಟನು.