ಶಿರಿಯದಲ್ಲಿ ಮತ್ತೆ ಅನಧಿಕೃತ ಹೊಯ್ಗೆ ಸಂಗ್ರಹ: ಕಡವು, ನೀರಿನೊಳಗೆ ಬಚ್ಚಿಟ್ಟಿದ್ದ ನಾಲ್ಕು ದೋಣಿಗಳ ನಾಶಗೊಳಿಸಿದ ಪೊಲೀಸರು
ಶಿರಿಯ ವಳಯಂನಲ್ಲಿ ಕಾರ್ಯಾಚರಿಸುತ್ತಿದ್ದ ಅನಧಿಕೃತ ಹೊಯ್ಗೆ ಸಂಗ್ರಹ ಕೇಂದ್ರವನ್ನು ಪೊಲೀಸರು ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ. ಅದೇ ರೀತಿ ಶಿರಿಯದ ಹೊಳೆಯಲ್ಲಿ ನೀರಿನೊಳಗೆ ಮುಳುಗಿಸಿಟ್ಟಿದ್ದ ನಾಲ್ಕು ದೋಣಿಗಳನ್ನು ಮೇಲಕ್ಕೆ ತಂದು ಜೆಸಿಬಿ ಬಳಸಿ ನಾಶಪಡಿಸಲಾಗಿದೆ. ಕೆಲವು ದಿನಗಳ ಹಿಂದೆ ಇದೇ ಸ್ಥಳದಲ್ಲಿದ್ದ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಅನಧಿಕೃತ ಕಡವನ್ನು ಡಿವೈಎಸ್ಪಿ ಪಿ.ಕೆ. ಸುಧಾಕರನ್ ನೇತೃತ್ವದಲ್ಲಿ ಪೊಲೀಸರು ನಾಶಗೊಳಿಸಿದ್ದರು. ಅದೇ ಸ್ಥಳದಲ್ಲಿ ಇದೀಗ ಮತ್ತೆ ಕಡವು ನಿರ್ಮಿಸಿ ಹೊಯ್ಗೆ ಸಂಗ್ರಹ ನಡೆಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಇನ್ಸ್ಪೆಕ್ಟರ್ ಇ. ಅನೂಪ್ ಕುಮಾರ್, ಎಸ್.ಐ. ವಿ.ಕೆ. ಅನೀಶ್, ಪೊಲೀಸರಾದ ರಘು, ವಿನೋದ್, ಬಿಜು ಎಂಬಿವರ ನೇತೃತ್ವದಲ್ಲಿ ನಿನ್ನೆ ದಾಳಿ ನಡೆಸಲಾಗಿದೆ. ಅನಧಿಕೃತ ಕಡವು ಇನ್ನು ಕೂಡಾ ಮುಂದುವರಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ