ಶ್ರೀಗಂಧ ಸಹಿತ ಮೂವರು ಸೆರೆ

ಕಣ್ಣೂರು: ಗೂಡ್ಸ್ ಆಟೋ ದಲ್ಲಿ ಸಾಗಿಸುತ್ತಿದ್ದ ಶ್ರೀಗಂಧದ ಕೊರಡುಗಳ ಸಹಿತ ಮೂರು ಮಂದಿಯನ್ನು ಬಂಧಿಸ ಲಾಗಿದೆ. ಕಣ್ಣೂರು ಮಾವಿಲಾಯಿ ನಿವಾಸಿ ಗಳಾದ ಪಿ.ವಿ. ವೈಷ್ಣವ್ (೨೫), ಶಿವನ್ (೨೫), ಎಂ.ಟಿ. ರಾಹಿನ್ (೩೨) ಎಂಬಿವರನ್ನು ನನ್ನೆ ರಾತ್ರಿ ಎಡಕ್ಕಾಡ್ ಪೊಲೀಸರು ಬಂಧಿಸಿ ದ್ದಾರೆ. ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದ ಗೂಡ್ಸ್ ಆಟೋವನ್ನು ತಪಾಸಣೆಗೈದಾಗ ಅದರಲ್ಲಿ ಶ್ರೀಗಂಧದ ಕೊರಡುಗಳು ಹಾಗೂ ಕೊಡಲಿ ಮೊದಲಾ ದವುಗಳನ್ನು ಪತ್ತೆಹಚ್ಚಲಾಗಿದೆ. ಸೆರೆಗೀಡಾದ ಮೂವರು ಹಲವು ಪ್ರಕರಣಗಳಲ್ಲಿ ಆರೋಪಿಗಳೆಂದು ತಿಳಿಸಿದ್ದಾರೆ.

You cannot copy contents of this page