ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ವಾರ್ಷಿಕೋತ್ಸವ ನಾಳೆ ಆರಂಭ
ಕಾಸರಗೋಡು: ನಗರದ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ವಾರ್ಷಿಕ ಜಾತ್ರೆ ನಾಳೆ ಆರಂಭಗೊಳ್ಳಲಿದ್ದು, ಈ ತಿಂಗಳ ೨೩ರವರೆಗೆ ನಡೆಯಲಿದೆ. ನಾಳೆ ಬೆಳಿಗ್ಗೆ ಗಣಪತಿ ಹೋಮ, ಬಳಿಕ ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಉತ್ಸವ ಬಲಿ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಭಜನೆ, ಚೆಂಡೆಮೇಳ, ರಾತ್ರಿ ಉತ್ಸವ ಬಲಿ ನಡೆಯಲಿದೆ.
20ರಂದು ರಾತ್ರಿ 7ಕ್ಕೆ ರಂಗಪೂಜೆ, ನಡುದೀಪೋತ್ಸವ, 21ರಂದು ರಾತ್ರಿ 7ಕ್ಕೆ ಕಟ್ಟೆಪೂಜೆ, 22ರಂದು ರಾತ್ರಿ 7ಕ್ಕೆ ಕರಂದಕ್ಕಾಡು ಬೆಡಿಕಟ್ಟೆಯಲ್ಲಿ ವಿಶೇಷ ಪೂಜೆ, 23ರಂದು ಸಂಜೆ 6ರಿಂದ ಕಟ್ಟೆಪೂಜೆ, ಅವಭೃತ ಸ್ನಾನ, ದರ್ಶನಬಲಿ, ಧ್ವಜಾವರೋಹಣ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ ವಿವಿಧ ದಿನಗಳಲ್ಲಿ ನಡೆಯಲಿದೆ. 28ರಂದು ಸಂಜೆ ರಕ್ತೇಶ್ವರಿ ನೇಮ, ರಾತ್ರಿ ಗುಳಿಗನ ಕೋಲ ನಡೆಯಲಿದೆ.