ಸಂಕಮ್ಮ ನಿಧನ

ಬೆಳ್ಳೂರು: ಇಲ್ಲಿನ ಐತ್ತನಡ್ಕ ನರಸಿಂಹ ಪ್ಯಾಲೇಸ್‌ನ ದಿ| ಮಂಜಪ್ಪ ಪೂಜಾರಿಯವರ ಪತ್ನಿ ಸಂಕಮ್ಮ (97) ನಿಧನ ಹೊಂದಿದರು. ಮೃತರು ಮಕ್ಕಳಾದ ದೂಮಪ್ಪ ಪೂಜಾರಿ, ಸೀತಮ್ಮ, ಲೀಲಾವತಿ, ನ್ಯಾಯವಾದಿ ಸಂಕಪ್ಪ ಪೂಜಾರಿ (ಉಡುಪಿ), ಶಶಿಪ್ರಭ, ಅಳಿಯಂದಿರಾದ ಚೆನ್ನಪ್ಪ ಪೂಜಾರಿ, ಅನಿಲ್ ಪೂಜಾರಿ, ಸೊಸೆಯಂದಿರಾದ ಜಯಂತಿ, ಜಯಶ್ರೀ, ಉಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮತ್ತಿತರ ಮಕ್ಕಳು ಪದ್ಮನಾಭ ಪೂಜಾರಿ ಹಾಗೂ ಚಂದ್ರಾವತಿ ಈ ಹಿಂದೆ ನಿಧನ ಹೊಂದಿದ್ದಾರೆ. ಸಂಕಮ್ಮ ಅವರ ನಿಧನಕ್ಕೆ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರ ಆಡಳಿತ ಮೊಕ್ತೇಸರ ಗಂಗಾಧರ ಬಲ್ಲಾಳ್, ಆಡಳಿತ ಸಮಿತಿ ಸದಸ್ಯ ಕಲ್ಲಗ ಚಂದ್ರಶೇಖರ ರಾವ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page