ಸಂಬಂಧಿಕರು ಆಗಮಿಸದ ಅಪರಿಚಿತ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು

ಕಾಸರಗೋಡು: ಹೊಸ ಬಸ್ ನಿಲ್ದಾಣ ಪರಿಸರದಿಂದ ಮೇ 7ರಂದು ಆಂಬುಲೆನ್ಸ್‌ನಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಂದು ದಾಖಲಿಸಿದ ನಂತರ ಸಾವನ್ನಪ್ಪಿದ 60 ವರ್ಷ ಪ್ರಾಯ ತೋರುವ ವ್ಯಕ್ತಿಯ ಸಂಬಂಧಿಕರು ಯಾರೂ ಈತನಕ ಆಗಮಿಸದೇ ಇರುವ ಹಿನ್ನೆಲೆಯಲ್ಲಿ  ಮೃತದೇಹವನ್ನು ಇಂದು ಮರ ಣೋತ್ತರ ಪರೀಕ್ಷೆಗೊಳಪಡಿಸ ಲಾಗು ವುದೆಂದು ಕಾಸರಗೋಡು ಪೊಲೀಸರು ತಿಳಿಸಿದ್ದಾರೆ. ಮೃತವ್ಯಕ್ತಿ  ನೆರೆಗೂದಲು ಹಾಗೂ ಗಡ್ಡ ಹೊಂದಿದ್ದು, ನಸು ಕಂದು ಬಣ್ಣದ ತೆಳ್ಳಗಿನ ಶರೀರ ಹೊಂದಿದ್ದಾರೆ.  164 ಸೆಂ.ಮೀ ಎತ್ತರ ಹೊಂದಿರುವ ಈ ವ್ಯಕ್ತಿಯ ಹೊಕ್ಕುಳ ಭಾಗದಲ್ಲಿ ಒಂದು ಕಪ್ಪು ಮಚ್ಚೆ ಇದೆ. ಕೆಂಪು ಮತ್ತು ಬಿಳಿ ಬಣ್ಣದ ಗೆರೆ ಹೊಂದಿರುವ ಅಂಗಿ ಹಾಗೂ ಕಾವಿ ಬಣ್ಣದ ಧೋತಿ ಇವರು ಧರಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page