ಸಚಿತಾಳಿಗೆ ಹಣ ನೀಡಿ ವಂಚನೆಗೀಡಾದ ಯುವತಿಯ ತಾಯಿ ಆತ್ಮಹತ್ಯೆ: ಕೊಲೆ ಪ್ರಕರಣ ದಾಖಲಿಸಬೇಕು-ಎಂ.ಎಲ್. ಅಶ್ವಿನಿ
ಬದಿಯಡ್ಕ: ಬದಿಯಡ್ಕ ಪಂ ಚಾಯತ್ ಮಾಜಿ ಸದಸ್ಯೆ, ಪಳ್ಳತ್ತಡ್ಕ ಬಳಿಯ ನೆಲ್ಲಿಕಳಯದ ಸರೋಜಿನಿ (50) ನೇಣು ಬಿಗಿದು ಆತ್ಮಹತ್ಯೆ ಗೈಯಲು ಕಾರಣ ಡಿವೈಎಫ್‌ಐ ಮಾಜಿ ನೇತಾರೆ ಸಚಿತಾ ರೈಯ ವಂಚನೆಯೇ ಆಗಿದೆಯೆಂದು ಆರೋಪವುಂ ಟಾಗಿದೆ. ಸರೋಜಿನಿಯ ಮಗಳು ಅಮೃತರಿಗೆ ಉದ್ಯೋಗ ದೊರಕಿಸು ವುದಾಗಿ ತಿಳಿಸಿ ಸಚಿತಾ ರೈ 12.70 ಲಕ್ಷ ರೂಪಾಯಿ ಪಡೆದು ವಂಚಿಸಿರುವು ದಾಗಿ ದೂರಲಾಗಿದೆ. ಈ ಬಗ್ಗೆ ಅಮೃತ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಸರೋಜಿನಿಯ ಚಿನ್ನಾಭರಣಗಳನ್ನು ಅಡವಿರಿಸಿ ಸಚಿತಾ ರೈಗೆ ಹಣ ನೀಡಲಾಗಿತ್ತೆನ್ನ ಲಾಗಿದೆ. ಆದರೆ ಮಗಳಿಗೆ ಉದ್ಯೋಗ ಲಭಿಸದೆ ವಂಚನೆಗೀಡಾದುದರಿಂದ ಸರೋಜಿನಿ ತೀವ್ರ ನೊಂದುಕೊಂಡಿ ದ್ದರೆಂದೂ ಇದುವೇ ಅವರ ಸಾವಿಗೆ ಕಾರಣವೆಂದು ಸಂಬಂಧಿಕರು ಆರೋಪಿಸಿ ದ್ದಾರೆ. ಈ ಬಗ್ಗೆ ತಿಳಿಸಿ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ಸರೋಜಿನಿಯ ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಿದ್ದು, ಅಂತ್ಯಸಂಸ್ಕಾರ ಇಂದು ಅಪರಾಹ್ನ ಮನೆ ಬಳಿ ನಡೆಸಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.
ಇದೇ ವೇಳೆ ಸರೋಜಿನಿಯ ಸಾವಿಗೆ ಸಂಬಂಧಿಸಿ ಸಚಿತಾ ರೈ ವಿರುದ್ಧ ಕೊಲೆ ಪ್ರಕರಣ ದಾಖಲಿಸ ಬೇಕೆಂದು ಮಹಿಳಾ ಮೋರ್ಛಾ ರಾಷ್ಟ್ರೀಯ ನಿರ್ವಾಹಕ ಸಮಿತಿ ಸದಸ್ಯೆ ಎಂ.ಎಲ್. ಅಶ್ವಿನಿ ಒತ್ತಾಯಿಸಿದ್ದಾರೆ.
ಸಚಿತಾ ರೈಗೆ ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷದೊಂದಿಗಿನ ಸ್ವಾಧೀನವೇ ಈ ರೀತಿ ಭಾರೀ ವಂಚನೆ ನಡೆಸಲು ಕಾರಣವಾಗಿದೆ. ಆದ್ದರಿಂದ ಸಚಿತಾ ರೈಯ ಸೊತ್ತುಗಳನ್ನು ಪತ್ತೆಹಚ್ಚಿ ದೂರುಗಾರರಿಗೆ ಹಣ ಮರಳಿ ನೀಡ ಬೇಕೆಂದೂ ಅಶ್ವಿನಿ ಒತ್ತಾಯಿಸಿದ್ದಾರೆ.