ಸಫಿಯಾ ಕೊಲೆ ಪ್ರಕರಣ: ನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ
ಕಾಸರಗೋಡು: ಇಡೀ ಜಿಲ್ಲೆಯನ್ನೇ ನಡುಗಿಸಿದ ಮಡಿಕೇರಿ ಅಯ್ಯಂಗೇರಿ ನಿವಾಸಿ ಹಾಗೂ ಮುಳಿಯಾರು ಮಾಸ್ತಿಕುಂಡಿನ ಗುತ್ತಿಗೆದಾರ ಕೆ.ಸಿ. ಹಂಸರ ಮನೆಕೆಲಸಕ್ಕಿದ್ದ ಸಫಿಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಷ್ಟ ಪರಿಹಾರ ನೀಡುವಂತೆ ಕೋರಿ ಆಕೆಯ ಹೆತ್ತವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಸಫಿಯಾಳ ಕುಟುಂಬಕ್ಕೆ ನಷ್ಟ ಪರಿಹಾರ ನೀಡುವಂತೆ ೨೦೧೫ರಲ್ಲಿ ನ್ಯಾಯಾಲಯ ನಿರ್ದೇಶ ನೀಡಿತ್ತು. ಆದರೆ ಆ ನಷ್ಟ ಪರಿಹಾರ ನಮಗೆ ಈತನಕ ಲಭಿಸಿಲ್ಲವೆಂದು ಮುಖ್ಯಮಂತ್ರಿಯವರಿಗೆ ನೀಡಿದ ದೂರಿನಲ್ಲಿ ಹೆತ್ತವರು ತಿಳಿಸಿದ್ದಾರೆ.
ಈ ಪ್ರಕರಣದ ಒಂದನೇ ಆರೋಪಿ ಮಾಸ್ತಿಕುಂಡಿನ ಗುತ್ತಿಗೆದಾರ ಕೆ.ಸಿ. ಹಂಸನಿಗೆ ೨೦೧೫ ಜುಲೈ ತಿಂಗಳಲ್ಲಿ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ಹಾಗೂ ಕೊಲೆಗೈಯ್ಯಲ್ಪಟ್ಟ ಸಫಿಯಾಳ ಹೆತ್ತವರಿಗೆ ೧೦ ಲಕ್ಷ ರೂ. ನಷ್ಟ ಪರಿಹಾರ ನೀಡುವಂತೆ ತೀರ್ಪು ನೀಡಿತ್ತು.
ಅದರ ವಿರುದ್ಧ ಆರೋಪಿ ಹಂಸ ಸಲ್ಲಿಸಿದ ಮೇಲ್ಮನ ವಿಯಲ್ಲಿ ಜಿಲ್ಲಾ ಸೆಶನ್ಸ್ ನ್ಯಾಯಾ ಲಯ ಆತನಿಗೆ ನೀಡಿದ ಗಲ್ಲು ಶಿಕ್ಷೆಯನ್ನು ಜೀವಾವಧಿ ಸಜೆಯಾಗಿ ಹೈಕೋರ್ಟ್ ರಿಯಾಯಿತಿ ನೀಡಿತ್ತಾ ದರೂ ನಷ್ಟ ಪರಿಹಾರ ನೀಡುವ ವಿಷಯದಲ್ಲಿ ಮಧ್ಯ ಪ್ರವೇಶಿಸಿರಲಿಲ್ಲ. ಆದ್ದರಿಂದ ಅದನ್ನು ನೀಡುವಂತೆ ಆಗ್ರಹಿಸಿ ಸಫಿಯಾಳ ಕುಟುಂಬ ದವರು ಇನ್ನೊಂದೆಡೆ ಕಾನೂನು ಕ್ರಮಕ್ಕೂ ಮುಂದಾಗಿದ್ದಾರೆ.