ಸಮುದ್ರದಲ್ಲಿ ಅನಧಿಕೃತ ಮೀನುಗಾರಿಕೆ: ಕರ್ನಾಟಕ ಬೋಟ್ ವಶಕ್ಕೆ

ಕಾಸರಗೋಡು: ಕೇರಳದ ಸಮುದ್ರ ಕರಾವಳಿ ಪ್ರದೇಶಕ್ಕೆ ಒಳಪಟ್ಟ ಕಾಸರಗೋಡು ಸಮುದ್ರ ದಡದಿಂದ 12 ನೋಟಿಕ್ಕಲ್ ದೂರದ ಸಮು ದ್ರದಲ್ಲಿ ರಾತ್ರಿ ವೇಳೆ ಅನಧಿಕೃತವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದ ಕರ್ನಾಟಕದ ಎರಡು ಬೋಟ್‌ಗಳನ್ನು ಕೇರಳ ಮೀನುಗಾರಿಕಾ ಇಲಾಖೆಯ ಮರೈನ್ ಎನ್‌ಫೋರ್ಸ್‌ಮೆಂಟ್ ಮತ್ತು ಕರಾವಳಿ ಠಾಣೆಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚ ರಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಆ ಎರಡೂ ಬೋಟ್‌ಗಳಿಗೆ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಕೆ.ಎ. ಲಬೀಬ್ ಐದು ಲಕ್ಷ ರೂ. ಜುಲ್ಮಾನೆ ವಿಧಿಸಿದ್ದಾರೆ.

You cannot copy contents of this page