ಸರಿಯಾದ ದಾಖಲುಪತ್ರಗಳಿಲ್ಲದೆ ಮನೆಯಲ್ಲಿ ಬಚ್ಚಿಡಲಾಗಿದ್ದ 17.3 ಲಕ್ಷ ರೂ. ವಶ
ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಮನೆಯೊಂ ದರಲ್ಲಿ ಬಚ್ಚಿಡಲಾಗಿದ್ದ 17,30,000 ರೂ. ನಗದನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಕೆ.ಪಿ. ಪ್ರತೀಶ್ ನೇತೃತ್ವದ ಪೊಲೀಸರ ತಂಡ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ.
ಉಳಿಯತ್ತಡ್ಕ ಸಮೀಪದ ಶಿರಿಬಾಗಿಲಿನ ಮನೆಯಿಂದ ಈ ನಗದನ್ನು ಪೊಲೀಸರು ಪತ್ತೆಹಚ್ಚಿ ದ್ದಾರೆ. ನಿನ್ನೆ ಸಂಜೆ ಪೊಲೀಸರು ಈ ಕಾರ್ಯಾಚರಣೆ ನಡೆದಿದೆ. ವಶಪಡಿಸಲಾದ ಹಣಕ್ಕೆ ಸಂಬಂಧಿ ಸಿದ ಅಧಿಕೃತ ದಾಖಲುಪತ್ರಗಳನ್ನು ಆ ಮನೆ ಮಾಲಕ ಹಾಜರುಪಡಿಸದೇ ಇದ್ದ ಹಿನ್ನೆಲೆಯಲ್ಲಿ ಅದನ್ನು ಇಂದು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರ. ಸರಿಯಾದ ದಾಖಲುಪತ್ರಗಳನ್ನು ಅದರ ಮಾಲಕ ನ್ಯಾಯಾಲಯದಲ್ಲಿ ಹಾಜರುಪಡಿಸಿದಲ್ಲಿ ಆ ಹಣ ಅವರಿಗೆ ಹಿಂತಿರುಗಿ ಲಭಿಸಲಿದೆ. ಇಲ್ಲವಾದಲ್ಲಿ ಅದು ಸರಕಾರಿ ಖಜಾನೆಗೆ ಸೇರಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.