ಸರಿಯಾದ ದಾಖಲೆಪತ್ರಗಳಿಲ್ಲದೆ ಸಾಗಿಸುತ್ತಿದ್ದ 9,98,500 ರೂ. ನಗದು ವಶ

ಮಂಜೇಶ್ವರ: ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ಮತ್ತು ಕೆಮು ತಂಡ ಜಂಟಿಯಾಗಿ ನಡೆಸಿದ ಕಾರ್ಯಾ ಚರಣೆಯಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ  ಕರ್ನಾಟಕ ರಾಜ್ಯ ಸರಕಾರಿ ಬಸ್‌ನಿಂದ ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ 9,98,500 ರೂ. ನಗದು ವಶಪಡಿಸಿ ಕೊಂಡಿದೆ. ತಪಾಸಣೆಗಾಗಿ  ಬಸ್‌ನ್ನು  ಅಬಕಾರಿ ತಂಡದವರು ಪರಿಶೀಲಿಸಿದಾಗ ಅದರೊಳಗೆ ಈ ಮಾಲು ಪತ್ತೆಯಾಗಿದೆ.  ಆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮುಳಿಯಾರು ಕಲಂದರ್ ಹೌಸ್‌ನ ಶೇಕ್ ಆರೀಫ್ ಎಂಬಾತನಿಂದ ಈ ಮಾಲು ವಶಪಡಿಸಲಾಗಿದೆ. ಬಳಿಕ ಈ ಹಣವನ್ನು ಮುಂದಿನ ತನಿಖೆಗಾಗಿ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.  ಎಕ್ಸೈಸ್ ಇನ್‌ಸ್ಪೆಕ್ಟರ್ ಆದರ್ಶ್ ಜಿ ಯವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದದ್ದು, ತಂಡದಲ್ಲಿ ಕೆಮು ಪ್ರಿವೆಂಟೀವ್ ಆಫೀಸರ್ ಜಿಜಿನ್ ಎಂ.ವಿ, ಇತರ ಸಿಬ್ಬಂದಿಗಳಾದ ಸುಬಿನ್ ಪಿಲಿಪ್, ಸನಲ್ ಕುಮಾರ್, ಪ್ರಿವೆಂಟೀವ್ ಆಫೀಸರ್‌ಗಳಾದ ಮೊಯ್ದೀನ್ ಸಾಜಿದ್, ಪ್ರಶಾಂತ್ ಕುಮಾರ್ ವಿ (ಗ್ರೇಡ್) ಮತ್ತು ರಾಹುಲ್ ಟಿ  ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page