ಸರ ಎಗರಿಸಿದ ಪ್ರಕರಣ : ಇನ್ನೋರ್ವ ಆರೋಪಿ ಬಂಧನ
ಕುಂಬಳೆ: ಚೇವಾರು ನಿವಾಸಿ ಕೃಷಿಕನ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾದ ಪ್ರಕರಣದಲ್ಲಿ ಇನ್ನೋರ್ವ ಸೆರೆಗೀಡಾದ ಆರೋಪಿ ನೆಲ್ಲಿಕಟ್ಟೆ ಬಳಿಯ ಚೆನ್ನಡ್ಕ ನಿವಾಸಿ ಮುಹಮ್ಮದ್ ಸುಹೈಲ್ನ ಸಹಚರನನ್ನು ಕುಂಬಳೆ ಎಸ್.ಐ ಟಿ.ಎಂ. ವಿಪಿನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಬಂಟ್ವಾಳ ಬಿಲಾಲ್ ನಗರ ನಿವಾಸಿ ಮೊಹಮ್ಮದಲಿ ಯಾನೆ ಅಸರು (38) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಎಸ್.ಐ ವಿಪಿನ್, ಸ್ಕ್ವಾಡ್ ಸದಸ್ಯರಾದ ಮನು, ಗೋಕುಲ್, ಗಿರೀಶ್, ವಿನೋದ್, ಸುಭಾಷ್, ಸಂಗೀತ, ರತೀಶ್ ಎಂಬಿವ ರನ್ನೊಳಗೊಂಡ ತಂಡ ಬಂಟ್ವಾಳ ಬಿಸಿರೋಡ್ ಬಳಿಯ ಶಾಂತಿಯಂಗಡಿ ಎಂಬಲ್ಲಿಂದ ಮೊಹಮ್ಮದಲಿಯನ್ನು ಬಂಧಿಸಿದೆ. ಆತನನ್ನು ಇಂದು ನ್ಯಾಯಾ ಲಯದಲ್ಲಿ ಹಾಜರುಪಡಿಸಲಾಗುವು ದೆಂದು ಪೊಲೀಸರು ತಿಳಿಸಿದ್ದಾರೆ.
ಕುಂಬಳೆ, ಬದಿಯಡ್ಕ, ನೀಲೇಶ್ವರ ಹಾಗೂ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ನಡೆದ ಸರ ಅಪಹರಣ, ದರೋಡೆ ಮೊದಲಾದ ಪ್ರಕರಣಗಳಲ್ಲಿ ಮೊಹ ಮ್ಮದಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಚೇವಾರಿನ ಕೃಷಿಕ ಗೋಪಾಲ ಕೃಷ್ಣ ಭಟ್ರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣದಲ್ಲಿ ಚೆನ್ನಡ್ಕ ನಿವಾಸಿ ಮುಹಮ್ಮದ್ ಸುಹೈಲ್ (32)ನ ಬಂಧನ ಇತ್ತೀಚೆಗೆ ದಾಖಲಿಸಲಾಗಿದೆ. ಕಳವು, ದರೋಡೆ ಸಹಿತ ವಿವಿಧ ಪ್ರಕರಣಕ್ಕೆ ಸಂಬಂಧಿಸಿ ಮುಹಮ್ಮದ್ ಸುಹೈಲ್ನನ್ನು ಇತ್ತೀಚೆಗೆ ಬಂಧಿಸ ಲಾಗಿತ್ತು. ಬಳಿಕ ನಡೆದ ತನಿಖೆಯಲ್ಲಿ ಗೋಪಾಲಕೃಷ್ಣ ಭಟ್ರ ಚಿನ್ನದ ಸರ ಎಗರಿಸಿರುವುದು ಮುಹಮ್ಮದ್ ಸುಹೈಲ್ ಆಗಿದ್ದಾನೆಂದು ತಿಳಿದುಬಂದಿತ್ತು. ಇದರಿಂದ ರಿಮಾಂಡ್ನಲ್ಲೇ ಆರೋಪಿಯ ಬಂಧನ ದಾಖಲಿ ಲಾಗಿದೆ. ಅಲ್ಲದೆ ಆತನನ್ನು ವಿಚಾರಿಸಿದಾಗ ಸಹಚರ ಮೊಹಮ್ಮದಲಿ ಯಾನೆ ಅಸರುವಿನ ಮಾಹಿತಿ ಲಭಿಸಿತ್ತು.