ಸಹೋದರಿಯಿಂದ 4 ತಿಂಗಳ ಮಗುವಿನ ಕೊಲೆ: ತನಗೆ ಪರಿಗಣನೆ ಕಡಿಮೆಯಾದೀತೆಂಬ ಭಯದಿಂದ 12ರ ಬಾಲಕಿಯ ಕೃತ್ಯ

ಕಣ್ಣೂರು: 4 ತಿಂಗಳ ಪ್ರಾಯದ ಮಗು ಬೆಳೆದರೆ ತನಗೆ ಲಭಿಸಬಹುದಾದ ಪರಿಗಣನೆ ಇಲ್ಲದಾಗಲಿದೆ ಎಂಬ ಭಯದಲ್ಲಿ ಬಾಲಕಿ ಮಗುವನ್ನು ಕೊಲೆಗೈದ ಬಗ್ಗೆ ತಿಳಿದು ಬಂದಿದೆ.  ಪಾಪಿನಿಶ್ಶೇರಿಯಲ್ಲಿ  ನಾಲ್ಕು ತಿಂಗಳ ಪ್ರಾಯದ ಮಗುವನ್ನು ಕೊಲೆಗೈದಿರುವುದಾಗಿ ಖಚಿತಪಡಿಸಲಾಗಿದೆ. ಕೊಲೆ ಪ್ರಕರಣದ ಹಿಂದೆ ಸಂಬಂಧಿಕೆಯಾದ 12ರ ಬಾಲಕಿ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ನಿನ್ನೆ ಬೆಳಿಗ್ಗೆ ಮನೆ ಸಮೀಪದ ಬಾವಿಯಲ್ಲಿ ಮಗು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಮಗುವಿನ ಸಾವಿನಲ್ಲಿ ಹೆತ್ತವರನ್ನೂ ಪೊಲೀಸರು ಪ್ರಶ್ನಿಸಿದ್ದರು. ಬಳಿಕ ನಡೆಸಿದ ತನಿಖೆಯಲ್ಲಿ 12ರ ಬಾಲಕಿ ಕೊಲೆ ನಡೆಸಿರುವುದಾಗಿ ಪತ್ತೆಹಚ್ಚಲಾಗಿದೆ.

ಆರೋಪಿ ಬಾಲಕಿಯನ್ನು ಜುವೈನಲ್ ಜಸ್ಟೀಸ್ ಬೋರ್ಡ್ ಮುಂಭಾಗ ಹಾಜರುಪಡಿಸ ಲಾಯಿತು. ಕೊಲೆಗೀಡಾದ ಮಗುವಿನ ಚಿಕ್ಕಪ್ಪನ ಪುತ್ರಿ 12ರ ಬಾಲಕಿ ಕೊಲೆ ಆರೋ ಪಿಯಾಗಿದ್ದಾಳೆ.

RELATED NEWS

You cannot copy contents of this page