ಬದಿಯಡ್ಕ: ಯುವಕನ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬಾಂಜತ್ತಡ್ಕ ನಿವಾಸಿ ಸುರೇಂದ್ರನ್- ಪುಷ್ಪ ದಂಪತಿ ಪುತ್ರ ಸುನಿಲೇಶ್ (24) ಮೃತಪಟ್ಟವರು. ಫ್ಯಾಬ್ರಿಕೇಶನ್ ನೌಕರನಾಗಿದ್ದರು. ಸೋಮವಾರ ಮನೆಯೊಳಗೆ ಮೃತ ದೇಹ ಪತ್ತೆಯಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು. ಮೃತರು ತಂದೆ, ತಾಯಿ, ಸಹೋದರಿಯರಾದ ಸುಸ್ಮಿತ, ಸುಶಾಂತಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






