ಸಿನಿಮಾ ನಟಿ ಮೇಲೆ ರೈಲಿನಲ್ಲಿ ಲೈಂಗಿಕ ಕಿರುಕುಳ: ಆರೋಪಿ ಸೆರೆ

ಕೋಟ್ಟಯಂ: ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಮೇಲೆ ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳದಂತಹ ಕೃತ್ಯಗಳು ಪುನರಾವರ್ತಿಸುತ್ತಿದೆ. ಇತ್ತೀಚೆಗೆ ತಮಿಳು ನಟಿಯಾದ ಯುವತಿ ಮೇಲೆ ಇದೇ ರೀತಿಯ ದುಷ್ಕೃತ್ಯ ನಡೆಸಿದ ಆರೋಪಿಯೋರ್ವ ಇದೀಗ ಸೆರೆಗೀಡಾಗಿದ್ದಾನೆ.

ಕೊಲ್ಲಂ ಚವರ ತಯ್ಯಿಲ್ ಅನ್ಸಾರ್ ಖಾನ್ (೨೫) ಎಂಬಾತನನ್ನು ಕೋಟ್ಟಯಂ ರೈಲ್ವೇ ಪೊಲೀಸರು ಸೆರೆಹಿಡಿದಿದ್ದಾರೆ. ಈ ತಿಂಗಳ ೧೨ರಂದು ಚೆನ್ನೈ-ತಿರುವನಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.

ತಮಿಳು ಸಿನಿಮಾ ನಟಿಯಾದ ಯುವತಿ ರೈಲಿನಲ್ಲಿ ಪ್ರಯಾಣ ವೇಳೆ ನಿದ್ದೆ ಮಾಡಿದ್ದು, ಈ ವೇಳೆ ಅಲ್ಲಿಗೆ ತಲುಪಿದ ಆರೋಪಿ ಆಕೆ ಮೇಲೆ  ಲೈಂಗಿಕ ಕಿರುಕುಳ ನೀಡಲೆತ್ನಿಸಿ ದ್ದಾನೆ. ಯುವತಿ ಎಚ್ಚೆತ್ತೊಡನೆ ಅಲ್ಲಿಂದ ಪರಾರಿಯಾದ ಆತ ಶೌಚಾಲಯ ದೊಳಗೆ ಅಡಗಿ ಕುಳಿತಿದ್ದನು. ರೈಲು ಕೋಟ್ಟಯಂಗೆ ತಲುಪುತ್ತಿದ್ದಂತೆ ರೈಲಿನಿಂದ ಹೊರಗೆ ಹಾರಿದ ಅನ್ಸಾರ್‌ಖಾನ್ ಓಡತೊಡಗಿದ್ದನು. ಯುವತಿ ಆತನನ್ನು ಬೆನ್ನಟ್ಟಿದ್ದು ಆದರೆ ತಪ್ಪಿಸಿಕೊಂಡಿದ್ದನು.  ಯುವತಿ ನೀಡಿದ ದೂರಿನಂತೆ ಕೇಸು ದಾಖಲಿಸಿಕೊಂಡ ರೈಲ್ವೇ ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಗುರುತುಹಚ್ಚಿದ್ದು, ಬಳಿಕ ಒಂದು ವಾರದೊಳಗೆ ಸೆರೆಹಿಡಿಯಲು ಸಾಧ್ಯವಾಯಿತು.  ಬಂಧಿತ ಅನ್ಸಾರ್‌ಖಾನ್ ಗಾಂಜಾ ಪ್ರಕರಣ ಗಳಲ್ಲೂ  ಆರೋಪಿ ಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page