ಸಿಪಿಎಂ ಏರಿಯಾ ಸಮ್ಮೇಳನ : ಕಳವಿಗೀಡಾದ್ದ ಧ್ವಜಸ್ತಂಭ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಅಣಂಗೂರಿನಲ್ಲಿ ಆರಂಭಗೊಂಡಿರುವ ಸಿಪಿಎಂ ಕಾಸರಗೋಡು ಏರಿಯಾ ಸಮ್ಮೇಳನ ನಗರದಲ್ಲಿ ಸ್ಥಾಪಿಸಲೆಂದು ಕೂಡ್ಲು ರಾಮದಾಸನಗರ ಸುರೇಂದ್ರನ್ ಸ್ಮಾರಕ ಸಂಸ್ಮರಣಾ ಮಂಟಪದ ಬಳಿ ಸಿದ್ಧ ಪಡಿಸಿ ಇರಿಸಲಾಗಿದ್ದ ಧ್ವಜಸ್ತಂಭ ಕಳವು ಗೈಯ್ಯಲ್ಪಟ್ಟ ಬೆನ್ನಲ್ಲೇ ಅದು ಅಲ್ಲೇ ಪಕ್ಕದ ೫೦೦ ಮೀಟರ್ ದೂರದ ಕೂಡ್ಲಿನ ಹಿತ್ತಿಲೊಂದರಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧ್ವಜಸ್ತಂಭ ಕಳವುಗೈದ ಬಗ್ಗೆ ಸಿಪಿಎಂ ಕಾಸರಗೋಡು ಏರಿಯಾ ಕಾರ್ಯ ದರ್ಶಿ ಕೆ. ಮೊಹಮ್ಮದ್ ಹನೀಫಾ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುವಂತೆಯೇ, ಅಲ್ಲೇ ಅಲ್ಪ ದೂರದ ಹಿತ್ತಿಲಲ್ಲಿ ಆ ಧ್ವಜ ಸ್ತಂಭ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧ್ವಜಸ್ತಂಭ ಕಳವು ಗೈಯ್ಯಲ್ಪಟ್ಟ ಹಿನ್ನೆಲೆಯಲ್ಲಿ ಪರ‍್ಯಾಯವಾಗಿ ಇನ್ನೊಂದು ಧ್ವಜಸ್ತಂಭ ತಯಾರಿಸಿ ಅದನ್ನು ಸಮ್ಮೇಳನ ನಗರಕ್ಕೆ ಜಾಥಾ ಮೂಲಕ ತಲುಪಿಸಲಾಗಿತ್ತು.