ಸಿಪಿಎಂ ಜಿಲ್ಲಾ ಸಮ್ಮೇಳನ ಇಂದು ಸಮಾಪ್ತಿ: ಸಂಜೆ ಬೃಹತ್ ರೆಡ್ ವಾಲೆಂಟಿಯರ್ ಮಾರ್ಚ್
ಹೊಸದುರ್ಗ: ಕಾಞಂಗಾಡ್ ನಲ್ಲಿ ನಡೆಯುತ್ತಿರುವ ಸಿಪಿಎಂ ಜಿಲ್ಲಾ ಸಮ್ಮೇಳನ ಇಂದು ಸಮಾಪ್ತಿ ಗೊಳ್ಳಲಿದೆ. ಸಮಾರೋಪ ಸಮ್ಮೇಳನವನ್ನು ಪಾಲಿಟ್ ಬ್ಯೂರೋ ಸದಸ್ಯ ಎ. ವಿಜಯ ರಾಘವನ್ ಉದ್ಘಾಟಿಸುವರು. ಸಮ್ಮೇಳನದ ಅಂಗವಾಗಿ ರೆಡ್ ವಾಲೆಂಟಿಯರ್ ಮಾರ್ಚ್ ಸಂಜೆ ೪ಕ್ಕೆ ಅಲಾಮಿಪಳ್ಳಿ ಹೊಸ ಬಸ್ ನಿಲ್ದಾಣ ಪರಿಸರದಿಂದ ಆರಂಭಗೊಳ್ಳಲಿದೆ. ಸಾರ್ವಜನಿಕ ಸಮ್ಮೇಳನ ನೋರ್ತ್ ಕೋಟಚ್ಚೇರಿ ಯಲ್ಲಿ ನಡೆಯಲಿದೆ. ಇದೇ ವೇಳೆ ಪಕ್ಷದ ನೂತನ ಜಿಲ್ಲಾ ಸೆಕ್ರೆಟರಿ ಯಾರಾಗಲಿದ್ದಾರೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಪ್ರಸ್ತುತ ಸೆಕ್ರೆಟರಿಯಾಗಿ ರುವ ಎಂ.ವಿ. ಬಾಲಕೃಷ್ಣನ್ ಆ ಸ್ಥಾನ ಮುಂದುವರಿಯುವರೇ ಅಥವಾ ಬೇರೆಯವರನ್ನು ನೇಮಿಸಲಾಗುವುದೇ ಎಂದೂ ಚರ್ಚೆಗಳು ನಡೆಯುತ್ತಿದೆ. ಇದೇ ವೇಳೆ ರಾಜ್ಯ ಸಮಿತಿ ಸದಸ್ಯ ಸಿ.ಎಚ್. ಕುಂಞಂಬು ಸೆಕ್ರೆಟರಿಯಾಗಿ ನೇಮಕಗೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಶಾಸಕ ಎಂ. ರಾಜ ಗೋಪಾಲನ್, ಕೆ.ವಿ ಕುಂಞಿರಾಮನ್ ಎಂಬಿವರ ಹೆಸರುಗಳೂ ಕೇಳಿ ಬರುತ್ತಿದೆ.