ಮುಳ್ಳೇರಿಯ: ಸಿಪಿಎಂ ಬ್ರಾಂಚ್ ಕಾರ್ಯದರ್ಶಿಯಾಗಿರುವ ವ್ಯಕ್ತಿ ಮನೆಯ ಸನ್‌ಶೇಡ್‌ನ ಕೊಕ್ಕೆಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಕಾರಡ್ಕ, ಶಾಂತಿ ನಗರ ನಿವಾಸಿ ಸಿ.ಎಚ್.ಶಶಿ (58) ಮೃತಪಟ್ಟವರು. ನಿನ್ನೆ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಯಾಗಿದೆ. ಮನೆಯಲ್ಲಿ ಏಕಾಂಗಿ ಯಾಗಿ ಇವರು ವಾಸಿಸುತ್ತಿದ್ದರು. ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಶಾಂತಿನಗರ ರಾಮಣ್ಣ ರೈ ಗ್ರಂಥಾಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿರುವ ಇವರು ದಿ| ಸಿ.ಎಚ್. ರಾಮ-ಲಕ್ಷ್ಮಿ ದಂಪತಿಯ ಪುತ್ರನಾಗಿದ್ದಾರೆ.
ಮೃತರು ಸಹೋದರರಾದ ಸಿ.ಎಚ್. ಗೋಪಾಲನ್ (ಶಾಂತಿನಗರದಲ್ಲಿ ವ್ಯಾಪಾರಿ), ಕೃಷ್ಣನ್ ಕೋಳಿಯಡ್ಕ, ಚಂದ್ರನ್, ಸಹೋದರಿಯರಾದ ಶಾಂತ,ಸುನಂದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.