ಸುಲ್ತಾನ್ ಗೋಲ್ಡ್‌ನಲ್ಲಿ ವಿಶ್ವ ವಜ್ರ ಪ್ರದರ್ಶನ ಆರಂಭ
ಕಾಸರಗೋಡು: ಎಂ.ಜಿ. ರಸ್ತೆಯಲ್ಲಿರುವ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನಲ್ಲಿ ಭಾರತದ ಪ್ರತಿಷ್ಠಿತ ವಜ್ರಾಭರಣಗಳ ಪ್ರದರ್ಶನ ‘ವಿಶ್ವ ವಜ್ರ’ವನ್ನು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸಿದರು. 13ನೇ ವರ್ಷದ ಆವೃತ್ತಿ ಇದಾಗಿದ್ದು, ಈ ತಿಂಗಳ 31ರವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ದಕ್ಷಿಣ ಭಾರತದ ಟಾಪ್ ಆಫ್ ಲೈನ್ ಡೈಮಂಡ್ ಆಭರಣಗಳು ಇಲ್ಲಿ ಲಭ್ಯವಿದೆ. ಕಾರ್ಯಕ್ರಮದಲ್ಲಿ ಜಿಸಿಸಿ ಉದ್ಯಮಿ ಅಶ್ರಫ್ ಹೊಸಂಗಡಿ, ಅರ್ಚಕ ನವೀನ್ ಕಾಯರ್ತಾಯ, ಡಿಸೈನರ್ ರಿಯಾಸ್ ಆಲಿ- ಜಸೀಲಾ ಕೆ.ಎಂ., ಬ್ಯೂಟಿಕೇರ್‌ಗಳಾದ ನಿಯಾಸ್- ಮಶಿತ, ಡಿಸೈನರ್ ಆಯಿಷತ್ ಸನಾ ಎಂ, ಮೇಕಪ್ ಆರ್ಟಿಸ್ಟ್‌ಗಳಾದ ಫಟೇಮ, ಆಶಾ ಸಂದೀಪ್ ಭಾಗವಹಿಸಿದರು.
ಪ್ರದರ್ಶನದಲ್ಲಿ ಖರೀದಿಸುವವರಿಗೆ ಪ್ರತೀ ಡೈಮಂಡ್ ಕ್ಯಾರೆಟ್‌ನ ಮೇಲೆ 8000 ರೂ.ವರೆಗೆ ಕಡಿತ ಲಭಿಸಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಇಟೆಲಿ, ಫ್ರಾನ್ಸ್, ಟರ್ಕಿ, ಬೆಲ್ಜಿಯಂ, ಯುಎಸ್‌ಎ, ಸಿಂಗಾಪೂರ್ ಮತ್ತು ಮಿಡ್ಲಿಸ್ಟ್ ದೇಶಗಳ 10,000ಕ್ಕೂ ಅಧಿಕ ಡೈಮಂಡ್ ಆಭರಣಗಳನ್ನು ಇಲ್ಲಿ ಸಿದ್ಧಪಡಿಸಲಾಗಿದೆ. ಈ ಬಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬ್ರಾಂಚ್ ಮುಖಂಡ ಅಶ್ರಫ್ ಅಲಿ ಮೂಸ, ಬ್ರಾಂಚ್ ಮೆನೇಜರ್ ಮುಹ ಮ್ಮದ್ ಮುಬೀನ್, ಸೇಲ್ಸ್ ಮೆನೇಜರ್ ಅಬ್ದುಲ್ ಮಜೀದ್, ಲಿಕ್ಸೋನ್ ಡೇವೀಸ್, ಮಾರ್ಕೆಟಿಂಗ್ ಮೆನೇಜರ್ ಅಬ್ದುಲ್ ಮಜೀದ್ ಮಾತನಾಡಿದರು.