ಸುವರ್ಣಗಿರಿ ಹೊಳೆಗೆ ತ್ಯಾಜ್ಯ ಎಸೆಯುವ ಕೃತ್ಯ ಮುಂದುವರಿಕೆ: ದುರ್ವಾಸನೆಯಿಂದ ಸ್ಥಳೀಯರಿಗೆ ಸಮಸ್ಯೆ

ಮಂಗಲ್ಪಾಡಿ: ಕುಬಣೂರು ಸುವರ್ಣಗಿರಿ ಹೊಳೆಯಲ್ಲಿ ತ್ಯಾಜ್ಯ ಎಸೆಯುವ ಕೃತ್ಯ ಮುಂದುವರಿದಿದ್ದು, ಈ ಪರಿಸರದಲ್ಲಿ ದುರ್ವಾಸನೆ ಯಿಂದ ಸಮಸ್ಯೆ ಉಂಟಾಗಿದೆ. ಈ ಹಿಂದೆಯೂ ಇಲ್ಲಿ ತ್ಯಾಜ್ಯ ಎಸೆದು ನೀರು ಮಲಿನೀಕರಣಗೊಳಿಸ ಲಾಗುತ್ತಿತ್ತು. ಇದರಿಂದ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಈಗ ಮತ್ತೆ ಹೊಳೆ ಸಹಿತ ಪರಿಸರದಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಭಾಗದಲ್ಲಿ ಕ್ಷೇತ್ರ, ಮಸೀದಿ, ಶಾಲೆ, ಹಲವಾರು ಮನೆಗಳಿದ್ದು, ನೂರಾರು ಮಂದಿ ಅತ್ತಿತ್ತ ಸಂಚರಿಸುವ ಸ್ಥಳವಾಗಿದೆ. ರಾತ್ರಿ ಕಾಲದಲ್ಲಿ ವಿವಿಧೆಡೆಗಳಿಂದ ತ್ಯಾಜ್ಯವನ್ನು ತಂದು ಇಲ್ಲಿ ಉಪೇಕ್ಷಿಸಲಾಗುತ್ತಿದೆ. ಈ ಪರಿಸರದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ತ್ಯಾಜ್ಯ ಉಪೇಕ್ಷಿಸುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page