ಸೇವಾ ಭಾರತಿ ಮಂಗಲ್ಪಾಡಿ ಕಾರ್ಯಕರ್ತರಿಂದ ಅಪರಿಚಿತ ಮೃತದೇಹದ ಅಂತ್ಯಸಂಸ್ಕಾರ

ಉಪ್ಪಳ: ಅಪರಿಚಿತ ಮೃತ ದೇಹದ ಅಂತ್ಯಸAಸ್ಕಾರವನ್ನು ಸೇವಾ ಭಾರತಿ ಮಂಗಲ್ಪಾಡಿ ಕಾರ್ಯಕರ್ತರು ನೆರವೇರಿಸಿದರು. ಬಂದ್ಯೋಡು ಬಳಿ ಯ ಹಳೆಯ ಸರ್ವೀಸ್ ಸ್ಟೇಷನ್ ಕಟ್ಟಡದಲ್ಲಿ ಜೀರ್ಣಾವಸ್ಥೆಯಲ್ಲಿ ನಿನ್ನೆ ಬೆಳಿಗ್ಗೆ ಸುಮಾರು 50 ವರ್ಷ ಪ್ರಾಯ ದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತÄ. ಕುಂಬಳೆ ಪೊಲೀಸರ ನೇತೄತ್ವದಲ್ಲಿ ಮರಣೋತ್ತರ ಪರೀಕ್ಷೆ ಪೆರಿಯಾರಂನಲ್ಲಿ ನಡೆಸಿ ಬಳಿಕ ಪೊಲೀಸರ ಉಪಸ್ಥಿತಿಯಲ್ಲಿ ನಿನ್ನೆ ಸಂಜೆ ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ಸೆವಾಭಾರತಿ ಮಂಗಲ್ಪಾಡಿ ಇದರ ಕಾರ್ಯರ್ತರು ಅಂತ್ಯಸAಸ್ಕಾರ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page