ಸೇವಾ ಭಾರತಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿ ರೂಪೀಕರಣ
ಕಾಸರಗೋಡು: ಮಾಧವ ಸೇವಾ ಮಾನವ ಸೇವಾ ಎಂಬ ಆಶಯವನ್ನಿಟ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸೇವಾಕಾರ್ಯಗಳಲ್ಲಿ ನಿರತವಾಗಿರುವ ಸೇವಾಭಾರತಿಯ ಮೊಗ್ರಾಲ್ ಪುತ್ತೂರು ಪಂಚಾಯತ್ ನೂತನ ಸಮಿತಿಯ ರೂಪೀಕರಣ ನಿನ್ನೆ ಪೆರ್ನಡ್ಕದಲ್ಲಿ ನಡೆಯಿತು. ಸೇವಾಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗೀತಾ ವಿಜಯನ್ ಉದ್ಘಾಟಿಸಿದರು. ಬಳಿಕ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಾಧಾಕೃಷ್ಣ ಮಾಸ್ಟರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರುತಿ, ಕೋಶಾಧಿಕಾರಿಯಾಗಿ ರಾಜೇಶ ಪುತ್ತೂರುಕೊಟ್ಯ, ಉಪಾಧ್ಯಕ್ಷರಾಗಿ ಶೈಲಜಾ ಮಜಲ್, ಸೂರಜ್ ರಕ್ತೇಶ್ವರಿಗುಡ್ಡೆ ಜೆÆತೆಕಾರ್ಯದರ್ಶಿ ಗಳಾಗಿ ದೀಕ್ಷಿತ್ ರಕ್ತೇಶ್ವರಿ ಗುಡ್ಡೆ ಹಾಗೂ ಗಿರಿಧರ ಕಲ್ಲಂಗೈ, ಮೀಡಿಯಾ ಕನ್ವೀನರ್ ಆಗಿ ರಾಕೇಶ್ ಪೆರಿಯಡ್ಕ ಅವರನ್ನು ಆರಿಸಲಾಯಿತು. ಬಳಿಕ ವಿವಿಧ ಆಯಾಮಗಳ ಪ್ರಮುಖರನ್ನು ಆಯ್ಕೆಮಾಡಲಾಯಿತು. ಆರೋಗ್ಯ ಆಯಾಮಕ್ಕೆ ರಾಮಚಂದ್ರ ಹೊಸಮನೆ, ಆಪತ್ ಸೇವಾ ಆಯಾಮಕ್ಕೆ ಅಜಯ್ ಕಡಪ್ಪುರಂ, ವಿದ್ಯಾಭ್ಯಾಸ ಆಯಾಮಕ್ಕೆ ವಿಶಾಲಾಕ್ಷಿ, ಸ್ವಾವಲಂಬನ ಆಯಾಮಕ್ಕೆ ಸುಜಿತ್, ಸಾಮಾಜಿಕ ಆಯಾಮಕ್ಕೆ ಶ್ರೀಧರ ಬೆದ್ರಡ್ಕ ಎಂಬವರನ್ನು ಆರಿಸ ಲಾಯಿತು.
ಸೇವಾಭಾರತಿ ನಗರ ವಲಯ ಪ್ರಧಾನಕಾರ್ಯದರ್ಶಿ ಸಂದೇಶ್ ಕೇಳುಗುಡ್ಡೆ ಭಾಗವಹಿಸಿದರು. ರಾಜೇಶ್ ಕಡಪ್ಪುರಂ, ಗಣೇಶ, ಸಂಪತ್, ಪವನ್ ಕೇಳುಗುಡ್ಡೆ, ವಿಜೇಶ್, ಗುರುಪ್ರಸಾದ್ ಉಪಸ್ಥಿತರಿದ್ದರು.