ಸೇವೆ ಕೊನೆಗೊಳಿಸಿದ 3591 ಸರಕಾರಿ ವಾಹನಗಳು


ಕಾಸರಗೋಡು: ಹದಿನೈದು ವರ್ಷಕ್ಕಿಂತ ಹೆಚ್ಚು ಹಳೆಯದಾದ ವಾಹನಗಳನ್ನು ಸೇವೆಯಿಂದ ಹೊರತುಪಡಿಸುವಂತೆ ಕೇಂದ್ರ ಸಾರಿಗೆ ಸಚಿವಾಲಯ ನೀಡಿದದ ನಿರ್ದೇಶನದಂತೆ ಅದಕ್ಕೆ ಪೂರಕ ಕ್ರಮ ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿದೆ.
ಇದರಂತೆ ನೋಂದಾವಣೆ ನಡೆದು ಹದಿನೈದು ವರ್ಷ ಪೂರ್ಣಗೊಂಡ ಎಲ್ಲಾ ವಾಹನಗಳ ಸೇವೆಯನ್ನು ರಾಜ್ಯ ಸರಕಾರ ಕೊನೆಗೊಳಿಸ ತೊಡಗಿದೆ. ಇಂತಹ ಕ್ರಮದಂಗವಾಗಿ 3,591 ವಾಹನಗಳನ್ನು ಸರಕಾರ ಹಿಂತೆಗೆದುಕೊAಡಿದೆ. ಹೀಗೆ ಸೇವೆಯಿಂದ ಹಿಂತೆಗೆದುಕೊಳ್ಳುವ ಸರಕಾರಿ ವಾಹನಗಳಲ್ಲಿ ಬಹುಪಾಲು ಪೊಲೀಸ್ ಇಲಾಖೆಗೆ ಸೇರಿದವುಗಳಾಗಿವೆ. ಆದರೆ ಹೀಗೆ ಸೇವೆ ರದ್ದುಪಡಿಸಿದ ಸರಕಾರಿ ವಾಹನಗಳ ಪಟ್ಟಿಯಲ್ಲಿ ಕೆಎಸ್ ಆರ್ಟಿಸಿ ಬಸ್ಸುಗಳನ್ನು ಒಳಪಡಿಸ ಲಾಗಿಲ್ಲ. ಅದರ ಲೆಕ್ಕಾಚಾರ ಬೇರೆಯೇ ಇದೆ.
ಹದಿನೈದು ವರ್ಷಕ್ಕಿಂತ ಹೆಚ್ಚು ಹಳೆಯದಾದ ವಾಹನಗಳನ್ನು ಬಳಸದಿರುವ ತೀರ್ಮಾನದಿಂದಾಗಿ, ಅದಕ್ಕೆ ಪರ್ಯಾರಯವಾಗಿ ಹೊಸ ವಾಹನಗಳನ್ನು ನೀಡುವಂತೆ ಸಂಬAಧಪಟ್ಟ ಇಲಾಖೆಗಳು ಈಗ ಸರಕಾರವನ್ನು ಸಮೀಪಿಸ ತೊಡಗಿವೆ. ಆದರೆ ಆರ್ಥಿಕ ಬಿಕ್ಕಿಟ್ಟಿನಿಂದ ಚಡಪಡಿಸುತ್ತಿರುವ ರಾಜ್ಯ ಸರಕಾರ ನಿಧಾನವಾಗಿ ಹೊಸ ವಾಹನಗಳನ್ನು ನೀಡುವ ಕ್ರಮದಲ್ಲಿ ತೊಡಗಿದೆ.
ಅತೀ ಹೆಚ್ಚು ಎಂಬAತೆ ಪೊಲೀಸ್ ಇಲಾಖೆಯ ಜೀಪು, ಬೈಕು, ಕಾರು ಸಹಿತ 15 ವರ್ಷಕ್ಕಿಂತ ಹಳೆಯದಾದ 916 ವಾಹನಗಳನ್ನು ಸೇವೆಯಿಂದ ಹಿಂಪಡೆಯಾಗಿದೆ. ಇದೇ ರೀತಿಯ ಲ್ಲಿ ಆರೋಗ್ಯ ಇಲಾಖೆಯ 610, ಅರಣ್ಯ ಇಲಾಖೆಯ 146 ವಾಹನಗಳ ಸೇವೆಯನ್ನೂ ರದ್ದುಪಡಿಸಲಾಗಿದೆ. ರಾಜ್ಯಲ್ಲಿ ಒಟ್ಟಾರೆಯಾಗಿ 124 ಸರಕಾರಿ ಇಲಾಖೆಗಳಿವೆ. 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ವಾಹನಗಳನ್ನು ಸೇವೆಯಿಂದ ಹಿಂತೆಗೆದುಕೊಳ್ಳಲಾಗುವುದು.

Leave a Reply

Your email address will not be published. Required fields are marked *

You cannot copy content of this page